Monday, May 12, 2014

"Facebook ಕವನ - ಹಡಪದ್ ಗಾಯನ"

ಇದು, ಅವಿರತ ತಂಡದ ಮತ್ತೊಂದು ಸದಭಿರುಚಿಯ ಕಾರ್ಯಕ್ರಮ. Facebookನ ಕವನಗಳಿಗೆ ಗಾಯನದ ರೂಪ ಕೊಡುವ ಮೊಟ್ಟ ಮೊದಲ ವಿನೂತನ ಪ್ರಯೋಗ ಇದಾಗಿತ್ತು. Facebookನಲ್ಲಿಯ ಆಯ್ದ ಕವನಗಳು ರಾಮಚಂದ್ರರ ಕಂಠದಲ್ಲಿ ಸುಶ್ರಾವ್ಯವಾಗಿ ಮೂಡಿಬಂದವು ಹಾಗೇ ಕೆಲವು ರಂಗಗೀತೆಗಳು, ಭಾವಗೀತೆಗಳು ಕೂಡ ಹಾಡಲ್ಪಟ್ಟವು. ನವ ಕವಿಗಳಿಗೆ ಬರವಣಿಗೆಯ ವಿಸ್ತಾರಕ್ಕೆ ಇದೊಂದು ಉತ್ತಮ ವೇದಿಕೆಯಾಯಿತು. ರಾಮಚಂದ್ರರು FBಲ್ಲಿ ಗೀಚಿದ ಕವನಗಳು ಹಾಗೂ ಕೆಲ ಆಯ್ದ ಭಾವಗೀತೆಗಳು ಸಂಗೀತ ರೂಪಕೊಡುವಲ್ಲಿ ಕಷ್ಟವಾಗಿದ್ದರೂ ಅತ್ಯುತ್ತಮವಾಗಿ ರಾಗ ಸಂಯೋಜಿಸಿ & ಮನೋಜ್ಞವಾಗಿ ಹಾಡಿ ಶ್ರೋತೃಗಳನ್ನು ಮನರಂಜಿಸಿದರು. ಗಾಯಕಿ ಸ್ಪರ್ಶ ಕೂಡ ಸುಂದರವಾಗಿ ಹಾಡಿದರು. ಹಡಪದ್ ಇತ್ತೀಚಿನ ದಿನಗಳ ಒಬ್ಬ ಅದ್ಭುತ ಗಾಯಕ ಹಾಗೂ ಸಂಗೀತ ಲೋಕದ ನವ ಮೋಡಿಗಾರವೆನ್ನುವದರಲ್ಲಿ ಸಂದೇಹವೇ ಇಲ್ಲ. ಅವರು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಲಿ ಮತ್ತು ಅವಿರತದ ಜೊತೆಗಿನ ಬಾಂಧವ್ಯ ಗಟ್ಟಿಯಾಗಲಿ ಎಂಬ ಆಶಯ.ಕಾರ್ಯಕ್ರಮಕ್ಕೆ ಹಾಜರಿದ್ದು, ಹಡಪದ್ ಹಾಗೂ ತಂಡದ ಗಾಯನವನ್ನು ಆಸ್ವಾದಿಸಿ, ನವ ಕವಿಗಳಿಗೆ ಉತ್ತೇಜನ ನೀಡಿ, ಅವಿರತದ ಈ ಹೊಸ ಪ್ರಯತ್ನಕ್ಕೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿಬೆಂಬಲಿಸಿದ ಕವಿಗಳಾದ ಏಚ್. ಎಸ್. ವೆಂಕಟೇಶ ಮೂರ್ತಿ ಹಾಗೂ ಬೀ. ಆರ್. ಲಕ್ಷ್ಮಣರಾವ್ ಅವರಿಗೆ ನಮ್ಮ ಹೃತ್ಪೂರ್ವಕ ನಮನಗಳು. ಹಡಪದ್, ಸ್ಪರ್ಶ ಹಾಗೂ ಸಂಗಡಿಗರಿಗೆ ಉತ್ತಮ ಸಂಗೀತ ಸಂಜೆ ನೀಡಿದಕ್ಕೆ ಅಭಿನಂದನೆಗಳು. ನಮ್ಮ ತಂಡಕ್ಕೆ ಬೆಂಬಲಿಸಿದ ಹಾಗೂ ಈ ಹೊಸ ಪ್ರಯತ್ನವನ್ನು ಪ್ರೋತ್ಸಾಹಿಸಿದ ಎಲ್ಲಾ ಸ್ನೇಹಿತ & ವೀಕ್ಷಕ ವರ್ಗಕ್ಕೆ ನಮ್ಮ ಧನ್ಯವಾದಗಳು. ಅವಿರತಕ್ಕೂ ಸಂತೃಪ್ತಿಯ ಭಾವ ತಂದ ಮತ್ತೊಂದು ಸಂಜೆಯ ವಿಶಿಷ್ಟ ಕಾರ್ಯಕ್ರಮ ಇದಾಯಿತು.

Wednesday, May 7, 2014

ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ನವರ ಗ್ರಾಮೀಣ ಮಕ್ಕಳ ಕಲಿಕಾ ಶಿಬಿರದಲ್ಲಿ ಅವಿರತವತಿಯಿಂದ ಕಂಪ್ಯೂಟರ್ ಶಿಕ್ಷಣ.



ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಈ ಬೇಸಿಗೆಯಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ವಿಶಿಷ್ಟವಾದ ಹತ್ತು ದಿನಗಳ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ’ಅವಿರತ ಪ್ರತಿಷ್ಟಾನ’ವೂ ಕೈ ಜೋಡಿಸಿದ್ದು ಹೆಮ್ಮೆಯ ಸಂಗತಿ.

ಗ್ರಾಮೀಣ ಮಕ್ಕಳಿಗಾಗಿಯೇ ರೂಪಿಸಿದ್ದ ಈ ಶಿಬಿರವು ಮುಖ್ಯವಾಗಿ ರಂಗ ಶಿಕ್ಷಣ, ಇಂಗ್ಲೀಷ್ ಕಲಿಕೆ, ಕಂಪ್ಯೂಟರ್ ಶಿಕ್ಷಣ ಹಾಗೂ ಸಾಮಾನ್ಯ ವಿಜ್ಞಾನ ವಿಷಯಗಳನ್ನೊಳಗೊಂಡಿತ್ತು.  ಸ್ಪರ್ಧಾ

ತ್ಮಕ ಜಗತ್ತನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳನ್ನು ಸಬಲರನ್ನಾಗಿ ಮಾಡಿ, ಅವರ ಹಿಂಜರಿಕೆಯನ್ನು ಹೋಗಲಾಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.

ಈ ಶಿಬಿರದಲ್ಲಿ ಕಂಪ್ಯೂಟರ್ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು "’ಅವಿರತ ಪ್ರತಿಷ್ಟಾನ" ವಹಿಸಿಕೊಂಡಿತ್ತು. ಅದಕ್ಕೆ ಸಂಬಂಧಪಟ್ಟ ಕೆಲವು ಮುಖ್ಯಾಂಶಗಳು ಹೀಗಿವೆ.

೧. ಕಂಪ್ಯೂಟರ್ ಶಿಬಿರವು ಏಪ್ರಿಲ್ ೩೦ ರಿಂದ ಮೇ ೭ ರ ತನಕ ನಡೆಯಿತು.  ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ಕಂಪ್ಯೂಟರ್  
    ಶಿಕ್ಷಣಕ್ಕೆ ಮೀಸಲಾಗಿತ್ತು. ಒಂದು ಗಂಟೆ ಪ್ರ್ಯಾಕ್ಟಿಕಲ್ಸ್ ಹಾಗೂ ಎರಡು ಗಂಟೆ ಥಿಯರಿ ತರಬೇತಿ ಕೊಡಲಾಯಿತು.
೨. ಮಂಡ್ಯ ಜಿಲ್ಲೆಯ ಗ್ರಾಮೀಣ ಶಾಲೆಯ ೭ ರಿಂದ ೧೦ನೇ ತರಗತಿಯ ಸುಮಾರು ೮೦ ವಿದ್ಯಾರ್ಥಿಗಳು ಶಿಬಿರಾರ್ಥಿಗಳಾಗಿದ್ದರು.
೩. ಕಂಪ್ಯೂಟರ್ ನ ಪ್ರಾಥಮಿಕ ವಿಷಯಗಳಾದ, ಹಾರ್ಡ್‌ವೇರ್, ಸಾಫ್ಟ್‌ವೇರ್, ಎಮೆಸ್ ವರ್ಡ್, ಎಮೆಸ್ ಎಕ್ಸ್ಸೆಲ್, ಪೇಂಟಿಂಗ್, ಇಂಟರ್‌ನೆಟ್
   ಮುಂತಾದವುಗಳ ಪರಿಚಯ ಮಾಡಿಸಲಾಯಿತು. ಸ್ವತಂತ್ರವಾಗಿ ಕಂಪ್ಯೂಟರ್ ನಿರ್ವಹಿಸುವ ಆತ್ಮವಿಶ್ವಾಸ ತರುವುದೇ ಇದರ ಉದ್ದೇಶವಾಗಿತ್ತು.
೪. ಈ ವಿಷಯದ ಸಲುವಾಗಿ ಉಪಯುಕ್ತ ಪಠ್ಯಕ್ರಮವನ್ನು ಸಿದ್ಧ ಪಡಿಸಲಾಗಿತ್ತು ಮತ್ತು ಎಲ್ಲ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಪಠ್ಯ ಪುಸ್ತಕಗಳನ್ನು ಅವಿರತವತಿಯಿಂದ ಒದಗಿಸಲಾಯಿತು.
೫. ಈ ಶಿಬಿರವು ಸತತ ಹತ್ತು ದಿನಗಳ ಕಾಲ ನಡೆದು, ಶಿಬಿರದಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳಿಗೂ, ಶಿಕ್ಷಕರಿಗೂ, ಸ್ವಯಂ ಸೇವಕರಿಗೂ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು
೬. ಅವಿರತದಿಂದ ಪ್ರತಿದಿನ ಒಂದೊಂದು ತಂಡದಂತೆ, ಒಟ್ಟು ೫೦ ಸ್ವಯಂ ಸೇವಕರು ತರಬೇತಿಯಲ್ಲಿ ಭಾಗವಸಿದ್ದರು.
೭. ಅವಿರತವತಿಯಿಂದ ಮೆಡಿಕಲ್ ಕ್ಯಾಂಪ್ ಕೂಡ ಇದೆ ಸಂದರ್ಭದಲ್ಲಿ ಮಾಡಲಾಯಿತು.

ಮಕ್ಕಳ ಉತ್ಸಾಹ, ಕಲಿಕಾ ಬಯಕೆ & ತುಡಿತ ನಮ್ಮನ್ನು ಇನ್ನಷ್ಟು ಭಾಗವಸಿಸುವಿಕೆಗೆ ಪ್ರೇರೇಪಿಸಿತು. ಶಿಬಿರದಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯತಾ ಭಾವ ನಮ್ಮದಾಗಿತ್ತು.

ಅವಿರತಕ್ಕೆ ಈ ಅವಕಾಶ ನೀಡಿದಕ್ಕೆ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ನವರಿಗೆ ಹೃತ್ಪೂರ್ವಕ ಧನ್ಯಾವಾದಗಳು.

Friday, November 15, 2013

'ಚಾಮರಾಜನಗರ'ದ ಅವಿರತ ಮೆಡಿಕಲ್ ಹೆಲ್ತ್ ಕ್ಯಾಂಪ್ ಬಗ್ಗೆ ಗುರು ಬಸವರಾಜ್ ಹೀಗೆ ಬರೆಯುತ್ತಾರೆ.....



ಓದುವ ಮುನ್ನ:
 ಭೀಮ ಧುರ್ಯೋಧನರ ಗಧಾ ಯುದ್ದವನ್ನು ಎರಡು ಪುಟಕ್ಕೆ ಮೀರದಂತೆ ಬರಿಯಿರಿ"
ನಿಮ್ಮ ನೆಚ್ಚಿನ ಒಳ್ಳೆ ಹವ್ಯಾಸ(favorite Hobby) ಎಂಬುದರ ಬಗ್ಗೆ ಒಂದು ಪುಟ ಕ್ಕೆ ಮೀರದಂತೆ ಪ್ರಭಂದ ಬರಿಯಿರಿ
ನಿಮ್ಮ ಶಾಲೆ ಮುಖ್ಯೊಪಧ್ಯಾಯರಿಗೆ ಮೂರು ದಿನ ರಜೆ ಬೇಕೆಂದು leave letter ಬರೆಯಿರಿ.
ಈ ತರಹದ ಪ್ರಶ್ನೆಗಳಿಗೆ  ೧೦ನೇ ತರಗತಿಯಲ್ಲಿ ಕ೦ಠಾಪಾಟ ಮಾಡಿ ವಿವರವಾಗೀ ಬರೆದದ್ದು ಬಿಟ್ಟರೆ ಇಷ್ಟು ಸವಿಸ್ತಾರವಾಗೀ
ಕನ್ನಡದಲ್ಲಿ ಬರೆಯುತ್ತಿರುವುದು ಇದೆ ಮೊದಲ ಬಾರಿ,
ಬರೆಯಲು ಭಯ ಮುಜುಗರ ಎನಿಸಿದರೂ ತಪ್ಪಾದರೆ ತಿದ್ದಲು ನಮ್ಮ ಅಶ್ವಥ್ ಸರ್, ಮತ್ತು ನನಗಿಂತ ಚಿಕ್ಕವರಾದರೂ ಚೊಕ್ಕವಾಗಿ ಬರೆಯುವ ಹವ್ಯಾಸವಿರುವ ನಮ್ಮ ರೋಹಿತ್, ಐಶ್ವರ್ಯ, ಪ್ರಸನ್ನ, ರಾಧಿಕಾ, ದೀಪಕ್ ಮಳಲಿ ರವರು, ಇದ್ದಾರೆ ಎಂಬ ಧೈರ್ಯದಿಂದ ಈ ಸಾಹಸಕ್ಕೆ ಕೈ ಹಾಕಿದ್ದೇನೆ. ಶಂಕರಭಟ್ಟರು ಹೇಳಿರುವಂತೆ ಅಲ್ಪಪ್ರಾಣ ಮಹಾಪ್ರಾಣಗಳ ವೆತ್ಯಾಸವೇನಿದ್ದರೂ ಸರಿಮಾಡಿಕೊಂಡು ಓದಬೇಕೆಂದು ವಿನಂತಿ)
 
“ಅವಿರತ ಅಂದರೆ ಏನು.?
ನಿಮ್ಮ ಈ ಗುಂಪಲ್ಲಿ ಎಷ್ಟು ಜನ ಇದ್ದೀರಾ.?
ನಿಮ್ಮ ಗುಂಪಲ್ಲಿ ಡಾಕ್ಟರ್ ಗಳೂ ಇದ್ದಾರಾ?
ನಿಮ್ಮ ಕಚೇರಿ ಎಲ್ಲಿ ಬರುತ್ತೆ.?
ನೀವೆಲ್ಲಾ meeting ಎಲ್ಲಿ ಸೇರ್ತೀರಾ ?
ಇದ್ದಾಕ್ಕೆಲ್ಲಾ ಹಣ ಹೇಗೆ ಸಂಗ್ರಹಿಸ್ತೀರಾ?
ಸರ್ಕಾರದಿಂದ ಏನಾದ್ರೂ ಸಹಾಯ ಪಡಿತೀರಾ?
ಇದನ್ನೆಲ್ಲಾ ಮಾಡಲು ಟೈಮ್ ಹೇಗೆ ಸಿಗುತ್ತೆ?
ಯಳಂದೂರು BEO officer ಕೇಳಿದ ಈ ಪ್ರಶ್ನೆಗಳಿಗೆ ಉತ್ತರಿಸಲು ಬಹಳ ಕಷ್ಟವಾಯಿತು.
 
ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಮೇಲೆ BEO officer ತೋರಿದ ಕೃತಜ್ಞಾತಾ ಭಾವಮಾಡಿದ ಪ್ರಶಂಶೆ, ನಮಗೆಲ್ಲಾ ಕೊಟ್ಟ ಮರ್ಯಾದೆಶಾಲೆ ಮೇಸ್ಟ್ರುಗಳೆಲ್ಲಾ ತೋರಿದ ಪ್ರೀತಿ, ಶಾಲೆ ಹುಡುಗರು ನಮ್ಮನ್ನೇನೋ celebrity ಗಳು ಎನ್ನುವ ಹಾಗೆ ನೋಡುತ್ತಾ ಕೈ ಕುಲುಕಲು ಮುಗಿಬಿದ್ದಾ ರೀತಿ...........ಇದ್ದಾನ್ನೆಲ್ಲ ನೋಡಿ ಅವಿರತ ಸದಸ್ಯ ಆಗಿದ್ದಕ್ಕೆ ಸಾರ್ಥಕವಾಯಿತು ಎನಿಸಿತು.
ಹೌದು ಇದೆಲ್ಲಾ ನೆಡೆದದ್ದು ಯಳಂದೂರು ಶಾಲೆಯ MEDICAL HEALTH CAMP project  ಟೈಮ್ ನಲ್ಲಿ.
 
ನನಗಿನ್ನೂ ನೆನಪಿದೆ ನಾವು ೧೦ ನೇ ತರಗತಿ ಮುಗಿಸಿ ಪೀ ಯೂ ಸಿ ಗೆ ಸೇರಲು ನಮ್ಮ ಮಾರ್ಕ್ಸ್ card, ಟಿ ಸಿ ನಕಲಿ ಪ್ರತಿಗಳನ್ನುಮಾಡ್ಬೇಕಾದ್ರೆ ನಕಲು ಪ್ರತಿ ಗಳಲ್ಲಿ ನಾವೇ ಅಂಕಗಳನ್ನು ತುಂಬಿ ಗೆಜೆಟೆಡ್ officer ಸಹಿ ಪಡಿಬೇಕಿತ್ತು (ಈಗಿನ ಹಾಗೆ ಜೇರಾಕ್ಸ್ ಇರಲಿಲ್ಲ)ಇದೆ ತರ BEO ಆಫೀಸರ್ ಕಛೇರಿ ಮುಂದೆ ಸರತಿ ಸಾಲಿನಲ್ಲಿ ನಿಂತು ಅವರ ಸಹಿಗೋಸ್ಕರ ಗಂಟೆಗಟ್ಟೆಲೆ ಕಾದ  ದಿನಗಳುಗೆಜೆಟೆಡ್officerಗಳನ್ನು  ದೇವರು ತರ ನೋಡುತಿದ್ದ  ಕಾಲ ನೆನಪಾದವುಇಂದು ಅದೇ ತರದ BEO officer, ನಮೆಗೆಲ್ಲ “ಸಾರ್” ಎಂದುಸ್ಂಭೋದಿಸಿದ ರೀತಿ, ಅವಿರತ ತಂಡಕ್ಕೆ ಕೊಟ್ಟ ಬೆಂಬಲ, ಕಂಡು ಬಹಳ ಖುಷಿಯಾಯಿತು.
 
 
ಹೊರುಡುವುದಕ್ಕೆ ಎರಡು ದಿನ ಮುಂಚೆ
ಸತೀಶ್ ಗೌಡ್ರು ಬೆಳಗ್ಗೆ -೩೦ ಘಂಟೆ ಗೆ ಬ್ಯಾಂಗಲುರ್ ಬಿಡಬೇಕು ಘಂಟೆಗೆ ಸರಿಯಾಗಿ ರಾಜರಾಜೇಶ್ವರಿ ಗೇಟ್ ಬಳಿ ಇರಬೇಕುಎಂದು ಹೇಳಿದಾಗಇದ್ದೆಲ್ಲಾ ಆಗೋ ಮಾತ,  ಅಂದು ಕೊಂಡಿದ್ದಂತೂ ನಿಜಆದರೆ ಎಲ್ಲಾರು ಸರಿಯಾದ ಟೈಮ್ ಗೆ ಸೇರಿದ್ದು ನೋಡಿದರೆಎಲ್ಲರಿಗೂ ಅವಿರತ  ಬಗ್ಗೆ ಇರುವ ಆಕ್ಕರೆ, ಶ್ರದ್ದೆ, ಎತ್ತಿ ತೋರುತ್ತದೆ.
ನಾವು ಮನೆಯನ್ನು  ಗಂಟೆ ಗೆ ಬಿಟ್ಟು ದಾರಿಯಲ್ಲಿ ಪೇಪರ್ ಹಾಕುವವರು ಮಿಲ್ಕ್ ಹಾಕುವವರು ಮನೆಮನೆ ಗಳಿಗೆ ಹಾಕಲುಜೋಡಿಸಿಕೊಳ್ಳುತ್ತಾ ಇರುವ ತಯಾರಿ, ನೋಡುತ್ತಾ ಬರೀ ೨೦ ನಿಮಿಷದಲ್ಲಿ ಮೈಸೊರ್ ರೋಡ್ ನ್ನು ತಲುಪಿದಾಗ ಆಬ್ಬಾ ಬ್ಯಾಂಗಲುರ್ಯಾವಾಗ್ಲೂ ಈಗೆ ಇರಬಾರದಾ ಅನ್ನಿಸಿತ್ತು.
ರಾಜರಾಜೇಶ್ವರಿ ಗೇಟ್ ಬಳಿ ಎಲ್ಲಾರು ಸೇರಿ ಅಲ್ಲಿಂದ ನಮ್ಮ ನಮ್ಮ ಕಾರು ಗಳಲ್ಲಿ ಹೊರಟು ತಿಂಡಿ ತಿನ್ನಲು ನಮ್ಮ ಹೆಜ್ಜೆಗೆಜ್ಜೆ ನೆಡೆದಜನಪದ ಲೋಕದ ಬಳಿ ಇರುವ ಹೋಟೆಲ್ ತಲುಪಿದಾಗ ಅವರಿನ್ನೂ ಮಲಗಿದ್ದನ್ನು ನೋಡಿ ಪರವಾಗಿಲ್ಲ ಪ್ರಂಪಂಚದಲ್ಲಿ ನಾವುಕೆಲವರಿಗಿಂತ fast ಇದ್ದೀವಿ ಅಂತ ಗೊತ್ತಾಯಿತುಗೌಡ್ರು ಅವರನ್ನುಬಿಡದೆ ಎಬ್ಬಿಸಿ ಕೊನೆಗೂ ತಿಂಡಿ ಮಾಡಿಸಿಕೊಂಡು ತಿಂದು ಅಲ್ಲಿಂದಯಳಂದೂರ್ ಕಡೆ ಪ್ರಯಾಣ ಬೆಳೆಸಿದಾಗ ಸರಿಯಾಗಿ ೮-೩೦ ಗಂಟೆ.
ಅಲ್ಲಿಂದ ನಾವು ಕೊಳ್ಳೇಗಾಲ ತಲುಪುವುದರ ಒಳಗೆ Dr. ಹಿಮಾಂಶು ಮತ್ತು ಇತರ ಡಾಕ್ಟರ್ ಗಳ ತಂಡ ಬ್ಯಾಂಗಲುರ್ ನ್ನು ನಮಗಿಂತತಡವಾಗಿ ಬಿಟ್ಟು ಕನಕಪುರ ಮಾರ್ಗವಾಗಿ ಕೊಳ್ಳೇಗಾಲ ತಲುಪಿ ಹೋಟೆಲ್ ನಲ್ಲಿ ತಿಂಡಿ ತಿನ್ನುತ್ತಿರುವುದು ನೋಡಿ ಇವರೇಷ್ಟು fast ಆಗಿಬಂದಿರಬಹುದು ಅಂತ ಬೆರಗಾಯಿತುಅಲ್ಲಿ ಎಲ್ಲಾ ಡಾಕ್ಟರ್ ಗಳ ಪರಿಚಯವನ್ನು ಚಿಕ್ಕದಾಗಿ ಮಾಡಿಕೊಂಡು ಶಾಲೆ ತಲುಪಿದಾಗ ೧೨ಗಂಟೆ,
ನಮ್ಮನ್ನೆಲ್ಲಾ ಕಾಯುತ್ತಿದ್ದ ಮಕ್ಕಳಿಗೆ ತಡ ಮಾಡದೆ ಮೆಡಿಕಲ್ ಚೆಕಪ್ ಸ್ಟಾರ್ಟ್ ಮಾಡಿಯೇ ಬಿಟ್ಟೆವುಡಾಕ್ಟರ್ ಎಲ್ಲಾ ತಯಾರಿಮಾಡುಕೊಳ್ಳುತ್ತಿರುವಾಗ ನಾವು ಅವಿರತ ಬ್ಯಾನರ್ ಕಟ್ಟುವಾಗ, BEO officer ಕೇಳಿದ ಪ್ರಶ್ನೆಗಳೇ ಪ್ರಾರಂಭದಲ್ಲಿಇರುವುದು...........................................................
ಇನ್ನೂ ಮಕ್ಕಳ ಆರೋಗ್ಯ ಅವರಿಲ್ಲಿರುವ ನ್ಯೂನತೆಗಳ ಬಗ್ಗೆ ಈಗಾಗಲೇ ಪ್ರಸನ್ನ ನವರು ಹೇಳಿರುವುದರಿಂದ ಅದರ ಬಗ್ಗೆ ಬರೆಯುತ್ತಿಲ್ಲ.ಆದರೆ ಬಹಳ ಮಕ್ಕಳು ಅಪೌಷ್ಟಿಕತೆ ಇಂದ ಇರುವುದು ಗೊತ್ತಾಯಿತುಅದಕ್ಕೆ ತಕ್ಕಂತೆ Dr. ನಿಜಗುಣ ಅವರು ಕೊಟ್ಟ ಸಲಹೆ ಪಾಲಿಸಿದರೆಶಿಕ್ಷಕರು ತಂದೆ ತಾಯಿಗಳಿಗೆ ಮಾರ್ಗದರ್ಶನಮಾಡಿ ಮಕ್ಕಳ ನ್ಯೂನತೆಗಳನ್ನು ಸರಿಪಡಿಸಿದರೆ ನಾವು medical camp ಮಾಡಿದ್ದಕ್ಕೂಸಾರ್ಥಕ.
 
ಇಲ್ಲಿ ತಮಾಷೆ ಸಂಗತಿ ಎಂದರೆ ವನಿತಾ ಕಾವ್ಯ ಕೃಪ  Dr. ಸ್ಟೆಥಾಸ್ಕೋಪ್  ಹಿಡಿದು Facebook ಗಾಗಿ  ಫೋಟೋ ತೆಗೆಸಿಕೊಳ್ಳುವಾಗ,ನಾನು ತೆಗೆಸಿಕೊಂಡೆ, “ನಾನು ಡಾಕ್ಟರ್ ಆಗಿದ್ದ್ರೆ ಚೆನ್ನಾಗಿತ್ತುಅಪ್ಪ ಹೇಳಿದ ಹಾಗೆ  PUC ಯಲ್ಲಿ ಇನ್ನ ಸೌಲ್ಪ ಮಾರ್ಕ್ಸ್ ಸ್ಕೋರ್ ಮಾಡಿದ್ದ್ರೆಚೆನ್ನಾಗಿತ್ತು” ಅಂತ ಅನಿಸಿದ್ದಂತೂ ನಿಜಬೇರೆಯವರದು ಗೊತ್ತಿಲ್ಲ.
 
ತಂದ ಬ್ಯಾಗ್ಸ್ ಯೂನಿಫಾರ್ಮ್ಸ್ ಎಲ್ಲಾ ಕೊಟ್ಟು ಹರೀಶ್ ಮನೆಯಲ್ಲಿ ರುಚಿಕಟ್ಟಾದ ಊಟ ಮಾಡಿದಾಗ ಸಮಯ -೩೦ಆತುರಾತುರವಾಗಿ ಊಟ ಮಾಡಿ ಎರಡು ಟೀಮ್ ಮಾಡಿಕೊಂಡು ಜಾಸ್ತಿ ಮಕ್ಕಳಿರುವ YK mole, uppina mole, ತಲುಪಿದಾಗ .೩೦ಸೌಲ್ಪವೂಸಮಯ ವ್ಯರ್ಥ ಮಾಡದೆ ಕೆಲಸ ಶುರು ಮಾಡೆಬಿಟ್ಟೆವುಎಲ್ಲರೂ ತಮಗೆ ಕೊಟ್ಟಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿದಾಗ ರಾತ್ರಿ ಗಂಟೆ ಎಲ್ಲಾ ಮೇಸ್ಟ್ರು ಮಕ್ಕಳಿಗೆ ಮನೆಗೆ ಹೋಗುವ ದಾವಂತ.
ಇಲ್ಲಿ ಬಂತು ನೋಡಿ ಆಘಾತ ಸುದ್ದಿ, Dr. ಕೇಶವ ಅವರ ತಂದೆಗೆ heart attact ಸುದ್ದಿಹರ್ಷ ಕೂಡ ಹುಷಾರಿಲ್ಲದೆ ಹೊರಟು ನಿಂತಿದ್ದರು,ಅವರ ಜೊತೆ ಕೇಶವವರನ್ನು ಕಳುಹಿಸಿದರು ಉಪಯೋಗ ವಾಗಲಿಲ್ಲ,ಅವರು ಬ್ಯಾಂಗಲುರ್ ತಲುಪುವುದರ ಒಳಗೆ ಅವರ ತಂದೆಇಹಲೋಕ ತ್ಯಜಿಸಿದ್ದರು. ಇದು ಒಂದೇ ನಮ್ಮ ಸಾರ್ಥಕ ಮೆಡಿಕಲ್ ಕ್ಯಾಂಪ್ ನ ಬೇಸರದ ಸಂಗತಿ……
 
ಇಲ್ಲಿ ಎಲ್ಲರೂ ಎಷ್ಟು busy ಆದ್ವಿ ಅಂದ್ರೆ,ಇಲ್ಲಿ ಯಾರಿಗೂ ಫೋಟೋ ತೆಗೆಸಿಕೊಳ್ಳಲು ಪುರುಸೊತ್ತೇ ಇರಲಿಲ್ಲನಮ್ಮ documents ಗೂಫೋಟೋ ಸಿಗಲಿಲ್ಲನನ್ನ ಮ್ಯಾಜಿಕ್ ಕಿಟ್ ಕಾರ್ ಅಲ್ಲಿ ಕೆಲಸ ವಿಲ್ಲದೆ ಕುಳಿತಿತ್ತುಅಲ್ಲಿಗೆ ನಾವು ಅಂದುಕೊಡಿದ್ದ ಹೆಲ್ತ್ ಕ್ಯಾಂಪ್ಮುಗಿಯಿತು.
 
ಮತ್ತೆ ಹರೀಶ್ ಮನೆಯಲ್ಲಿ ಟಿ ಮುಗಿಸಿ ಬುಕ್ ಮಾಡಿದ್ದ ಫಾರ್ಮ್ ಹೌಸ್ ತಲುಪಿದಾಗ ರಾತ್ರಿ ೯ಗಂಟೆ,  ಬೇರೆಯವರೆಲ್ಲ ಬಂದಾಗ ರಾತ್ರಿ೧೦.೩೦
ಇಲ್ಲಿ ನಮ್ಮ ಅವಿರತದ ಎಲ್ಲಾ main singers  ರಂಗ,ಕೃಪ,ಐಶ್ವರ್ಯ ಇದ್ದಾರೆಎಲ್ಲಾರ ಕೈಯಲ್ಲೂ ಹಾಡಿಸಿವುದಕ್ಕಾಗಿ ನಾನು ದೀಪಕ್ಲಿರಿಕ್ ಎಲ್ಲಾ ಡೌನ್ ಲೋಡ್ ಮಾಡಿ ಪ್ರಿಂಟೌಟ್ ತೆಗೆದು ಕೊಂಡಿದ್ದ  ಶೀಟ್ ಹಿಡಿದು ಕಾಯುತ್ತಾ ಕುಳಿತು ಎಲ್ಲಾ ಸೇರಿದಾಗ ರಾತ್ರಿ೧೧.೩೦ಪ್ರಯಾಣದ ಸುಸ್ತುಹಸಿವು ಬೇರೆ ಟೈಮ್ ನಲ್ಲಿ ಹಾಡುವುದಕ್ಕೆ ಯಾರಿಗೆ ತಾನೇ ಮೂಡ್ ಇರುತ್ತೆ,  ಆದರೆ ಎಲ್ಲಾ ಸೇರಿಹಾಡುಗಳನ್ನು ಸ್ಟಾರ್ಟ್ ಮಾಡಿಯೇ ಬಿಟ್ಟೆವು.  ಅಂದುಕೊಂಡಕ್ಕಿಂತಲೂ ಸಂಗೀತ ಕಾರ್ಯಕ್ರಮ ಚೆನ್ನಾಗಿ ಬಂತುನಿಜಗುಣ ಅವರ ದೇಶಿಭಾಷೆ ಹಾಡುಗಳು ತುಂಬಾನೇ ಮಜಾ ಕೊಟ್ಟವು, ಓಲ್ಡ್ ಸಾಂಗ್ ಎಕ್ಸ್‌ಪರ್ಟ್ ಜಗ್ದೀಶ್, ಡುಯೆಟ್ ಸಾಂಗ್ ಎಕ್ಸ್‌ಪರ್ಟ್ ರವಿ, ವಿಶೇಷ ಧ್ವನಿಯ ಲಾಲಿತ್ಯವಿರುವ ಸ್ವಪ್ನ ಅವರ ಗೈರು ಎದ್ದು ಕಾಣ್ತಾ ಇತ್ತುಭಟ್ಟರು ಊಟ ಕ್ಕೆ ಕರೆದಾಗಲೇ ಹಸಿವಿನ ಬಗ್ಗೆ ಗೊತ್ತಾಗಿದ್ದುಅದ್ಭುತಊಟಮಲಗಿದಾಗ ರಾತ್ರಿ -೩೦.
ಅಲ್ಲಿಗೆ ನಮ್ಮ ಮೊದಲನೇ ದಿನ ಮುಕ್ತಾಯ.
 
ಎರಡನೇ ದಿನ ಬೆಳಗ್ಗೆ ಮಾರ್ನಿಂಗ್ ವಾಕ್ಫಾರ್ಮ್ ಹೌಸ್ ವೀಕ್ಷಣೆಬಿಳಿಗಿರಿ ರಂಗನಾಥನ ದರ್ಶನ, k.ಗುಡಿ ಗೆ ಹೋಗುವಾಗ ಕಾಡಿನ ನಡುವೆ ೧೦-೨೦ ಕಿ ಮೀ ವೇಗ ದಲ್ಲಿ ಕಾರ್ ಓಡಿಸುತ್ತಾ ಯಾವುದಾದರೂ ಪ್ರಾಣಿ ಕಾಣುತ್ತಾ ಎಂದು ಎಲ್ಲಾ ಕಿಟಿಕೆ ಕಡೆ ನೋಡುತ್ತಾ ಪ್ರಯಾಣ ಮಾಡಿದ್ದು ಮರೆಯಲಾಗದ್ದು.. ಎಲ್ಲರಿಗಿಂತ ಮುಂದೆ ಹೋಗುತಿದ್ದ ನಮ್ಮ ಕಾರ್ ಗೆ ಮಾತ್ರ ಕಾಡುಹಂದಿ ಕಂಡಿದ್ದು. ಕಾರ್ ನೆಲ್ಲಾ ಆಫ್ ಮಾಡಿ,ಇನ್ನೇನು ಫೋಟೋ ತೆಗೀಬೇಕು ಅಂತ ಇರುವಾಗ ಯಾರೋ ಬಿಹಾರ್ ಯುವ ಜೋಡಿ ಕಾಡಿನ ಬಗ್ಗೆ ಒಂಚೂರು ಕಾಳಜಿ ಇಲ್ಲದೆ ಹಾರ್ನ್ ಮಾಡುತ್ತಾ ಬೈಕ್ ಹೊಡಿಸಿಕೊಂಡು ಹೋದಾಗ, ಹಂದಿ ಕಾಡಿನ ಒಳಗೆ ಹೊಡೀತು. ಮುಂದೆ ಇದೆ ಜೋಡಿ ಬೈಕ್ ನಿಲ್ಲಿಸಿ ಸಿಗರೇಟ್ ಸೇದುತ್ತಾ ನಿಂತದ್ದನ್ನು ನೋಡಿ ನಮ್ಮ ಕಾರ್ ಅಲ್ಲಿ ಇರುವವರು ಇಲ್ಲೆಲ್ಲಾ ಸಿಗರೇಟ್ ಸೇದಬಾರದು ಬೆಂಕಿ ಬೀಳಬಹುದು ಎಂದು ಬುದ್ದಿ ಹೇಳಲು ಹೋದ ನಮಗೆ ಆವಾಜ್ ಹಾಕಲು ಬಂದಾಗ ನಾನು ಹಾಕಿರುವ ಡ್ರೆಸ್ ನೋಡಿ ಯಾರೋ ಫಾರೆಸ್ಟ್ ಆಫೀಸರ್ ಇರಬಹುದು ಎಂದು ಪಲಾಯನ ಮಾಡಿದ್ದು ನೋಡಿ ಪರವಾಗಿಲ್ಲ ನನಗೂ ಆಫೀಸರ್ ಆಗುವ ಲಕ್ಷಣಗಳು ಇವೆ ಎನಿಸಿ ನಗು ಬಂತು..
 ಅರಣ್ಯ ಸಫಾರಿಕಾಡು ಪ್ರಾಣಿಗಳ ದರ್ಶನಕಾಡುಹಂದಿಕಾಡುಕೋಣಕಾಡುಕೋಳಿಜಿಂಕೆಎಲ್ಲಾವನ್ನು ನೋಡಿ ನನಗನಿಸಿದ್ದು, (ಬೇರೆಯವ್ರಿಗೂ ಅನಿಸಿರ ಬಹುದು) “ಜಿಂಕೆಗಳು ಎಂಥಾ ಸಾದು ಪ್ರಾಣಿ ಆಡು ಕುರಿ ಗಳ ಹಾಗೆ ಇವು ಊರಲ್ಲೇ ಇರಬಹುದಿತ್ತಲ್ಲಾ ಹುಲಿಸಿಂಹಕ್ಕೆ ಹೆದರಿ ದಿನ ದೂಡುವುದೇಕೆ ಎನಿಸಿತ್ತು.”
ಅಂತೂ ಇಂತೂ ಕೊನೆಗೂ ಎಲ್ಲಾ ಒಂದು ಕಡೆ ಸೇರಿ ಒಂದು ಗ್ರೂಪ್ ಫೋಟೋ ತೆಗೆಸಿಕೊಂಡೆವುಇಲ್ಲಿ ಒಂದು ಕಡೆ ಬಿಟ್ಟರೆ ಗ್ರೂಪ್ ಫೋಟೋಕ್ಕೆ ಒಟ್ಟಾಗಿ ನಾವು ಎಲ್ಲೂ ಸೇರಲೆ ಇಲ್ಲ.
ಇಲ್ಲಿಂದ ಒಬ್ಬಬ್ಬರೇ ಬ್ಯಾಂಗಲುರ್ ಕಡೆ ಪ್ರಯಾಣ ಬೆಳೆಸಿದರು.
ಮತ್ತೆ ಫಾರ್ಮ್ ಹೌಸ್ ತಲುಪಿದಾಗರಾತ್ರಿ ೮ಗಂಟೆಎಲ್ಲಾ ಸೇರಿ ಕಿವುಡ ಮೂಗರ ಆಟವಾಡುವಾಗ ನನಗೆ ಹೋಗಿ ಸೇರಬೇಕಿನಿಸಿದರುದೇಹದ ಸುಸ್ತು ಅವಕಾಶ ಕೊಡಲಿಲ್ಲಮಲಗಿದಲ್ಲಿಂದಲೇ ಹೊನ್ನೆಮರಡು ಟ್ರಿಪ್ ಅಲ್ಲಿ ನಮ್ಮ ದೀಪು sirish ge ನಾವೆಂದೂ ಕೇಳರಿಯದ ಶ್ರೀ ಶ್ರೀ ------ ---- ಮಹಾತ್ಮೆ”,ಸಿನಿಮಾ ಹೆಸರನ್ನು ಕೊಟ್ಟು ಕಾಡಿದ ಆಟ ಮರುಕಳಿಸಬಹುದೋ ಎಂದು ಕಾದೆಅಂತ ಯಾವುದೇ ಪ್ರಯಾಸದ ಸಿನಿಮಾದ ಹೆಸರು ಕೇಳಲಿಲ್ಲ.
 ರಾತ್ರಿ ಎಲ್ಲಾ ಒಟ್ಟಿಗೆ ಊಟಕ್ಕೆ ಕೂತು bangalore ನಿಂದ ಬಂದ ೨೬ ಜನರಲ್ಲಿ,ಇರುವವರ ಲೆಕ್ಕ ಹಾಕಿದಾಗ ಇದ್ದದ್ದು ಬರೀ ೧೭, ಅದರಲ್ಲಿ ಕೆಲವರು ಅರ್ಲೀ ಮಾರ್ನಿಂಗ್ ಹೋಗುವುದಕ್ಕೆ ರೆಡಿ ಆಗುತಿದ್ದರು. ಮಲಗಿಕೊಳ್ಳಿ ನೀವೆಲ್ಲ ಬೇಗ ಹೋಗಬೇಕು ಎಂದರೂ, ರಾತ್ರಿ ೧-೩೦ ರ ವರೆಗೂ ಸಚಿನ್ ಗೆ ಭಾರತ ರತ್ನ ಕೊಟ್ಟ ವಿಷಯವಾಗಿ whatsup ಅಲ್ಲಿ ಚರ್ಚೆ, ಆ ಚರ್ಚೆ ಇವತ್ತಿನ ವರೆಗೂ ಮುಗಿದಿಲ್ಲ, ಮುಗಿವುದುಇಲ್ಲಾ ಎನಿಸುತ್ತೆ.
ಮರುದಿನ ನಮ್ಮ ಕಾರ್ ನವರು ಫಾರ್ಮ್ ಹೌಸ್ ಬಿಟ್ಟಾಗ ಬೆಳಗ್ಗೆ ೧೦-೩೦ಅಲ್ಲಿಂದ ಬರುವಾಗ ಮಾರ್ಗ ಮದ್ದ್ಯದಲ್ಲಿ ಸಿಗುವ ಗುಂಡಾಲ್ಡ್ಯಾಮ್ ತಲುಪಿದಾಗ ೧೧-೩೦  ಏನನ್ನು ಅಪೇಕ್ಷಿಸದೆ ಸುಮ್ಮನೆ ನೋಡಲು ಹೋದ ನಮಗೆ ಅಲ್ಲಿನ ನಿಸರ್ಗ ಸೌದರ್ಯ ಕಂಡು ಅಯ್ಯೋಎಲ್ಲರನ್ನೂ ಕರೆತರಲಿಲ್ಲವೇಕೆ ಅನ್ನಿಸದೆ ಇರಲಿಲ್ಲಅಲ್ಲಿ ಇದ್ದದು ನಮ್ಮ ಕಾರ್ ನಲ್ಲಿ ಇರುವವರು ಮಾತ್ರಬೆಟ್ಟಗಳ ನಡುವೆ ಭೂಮಿಗೆಹತ್ತಿರವಾಗಿ ತೇಲುವ ಮೋಡಗಳು,  ನೀರಿನಲ್ಲಿ ಬೆಟ್ಟಗಳ reflection ಆದ್ಭುತ.
ಇರುವ ನಾವು  ಜನರೇ ಫೋಟೋ ತೆಗಿಸಿಕೊಂಡು ದಾರಿಯಲ್ಲಿ ಸಿಕ್ಕ ಡಾಬಾ ದಲ್ಲಿ ಊಟ ಮಾಡಿ ದೀಪಕ್ ಕೈಯಲ್ಲಿ ಕಾರ್ ಓಡಿಸಲುಕೊಟ್ಟುನಿದ್ದೆ ಬಂದತಾಗಿ ಕಣ್ಣುಮುಚ್ಚಿದಾಗ ಹೊನ್ನೆಮರಡು ಟ್ರಿಪ್ ಗೆ ಬಂದ, ಮಂಜು, ಸೋಮ, ಶಶಿ, ರವಿ, ಅಂಜನ್ ವಾಲೀ, ದೀಪು, ಇದ್ದರೆ ಇನ್ನೂ ಚೆನ್ನಾಗಿತ್ತು ಎನಿಸಿತು, ಟ್ರಿಪ್ ಮುಗಿದೇ ಹೋಯಿತಲ್ಲ ಎಂದು ಬೇಸರವಾದರೂ ನಾವು ಫ್ಯಾಮಿಲೀ ಕೇರ್ ಗೆ ಮತ್ತು ನಮ್ಮ ರೆಸ್ಟ್‌ಗೇಂದು ಸಿಗುವ ವರ್ಷದ ಯಾವುದಾದರೂ ಒಂದು ಅಥವಾ ಎರಡು ವೀಕ್ ಎಂಡ್ ಗಳನ್ನು ಅವಿರತ ಈ ತರದ ಕೆಲಸಗಳಿಗೆ ಮೀಸಲು ಇಟ್ಟರೆ ನಾಡು ನುಡಿ ಪರಿಸರಕ್ಕೆ ಎಂತೆಂಥಾ ಕೆಲಸಗಳನ್ನು ಮಾಡಬಹುದು ಎನಿಸಿತ್ತು. ಹಾಗೆ ನಿದ್ದೆ ಬಂದು ಕಣ್ಣು ಬಿಟ್ಟಾಗ ಅದೇ ಬ್ಯಾಂಗಲುರ್, ಅದೇ ಗಿಜಿಗುಡುವ ವಾಹನ ಸಂಚಾರ, ಅದೇ ಕಲರ್ ಫುಲ್ ಮಾಲ್‌ಗಳು…………………………...
 
ಈ ಪ್ರಾಜೆಕ್ಟ್ ನ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಡಾಕ್ಟರ್ ಕೇಶವವರಿಗೆ ಸೇರಬೇಕು. ತಂದೆಯ ಆರೋಗ್ಯದ ಬಗ್ಗೆ ಗೊತ್ತಿದ್ದೋ ಗೊತ್ತಿಲ್ಲವೋ ಅವರು ತೋರಿದ ಕಾರ್ಯವೈಕರಿ ಮೆಚ್ಚಲೇ ಬೇಕು.
ಇನ್ನು Women ಆಫ್  ಪ್ರಾಜೆಕ್ಟ್ MRS. ಮಧು ಅವರಿಗೆ ಸೇರಬೇಕುಡಾಕ್ಟರ್ ಹರ್ಷ ಅಲ್ಲಿವರಿಗೂ ಬಂದು ಆರೋಗ್ಯ ಸರಿ ಇರದೆ ಕಾರ್ನಲ್ಲಿ ಮಲಗಿದಾಗ ಒಂದು ಕಡೆ ಗಂಡನ takecare ಮಾಡುತ್ತಾ ಹಳ್ಳಿ ಹಳ್ಳಿ ಗೆ ಡ್ರೈವ್ ಮಾಡುತ್ತಾ ಹೋಗಿ ಮಕ್ಕಳನ್ನು ಕರೆತಂದು ಅವರಆರೋಗ್ಯ ತಪಾಸಣೆ ಯಲ್ಲಿ ತೋರಿದ ಕಾರ್ಯವೈಕರಿ ಗೆ. ಮ್ಯಾನ್ ಆಫ್ ಸೀರೀಸ್ಹರೀಶ್ ಮತ್ತು ಫ್ಯಾಮಿಲೀ ಗೆ ಸೇರಬೇಕು.

Sunday, July 28, 2013

ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆ - ಒಂದು ಕಾರ್ಯಾಗಾರ

ಆತ್ಮೀಯರೆ,

ಅವಿರತ ಇತರೇ ವಿಭಿನ್ನ ಕಾರ್ಯಕ್ರಮಗಳನ್ನು ರೂಪಿಸಬೇಕು ಅನ್ನುವುದು ಅನೇಕ ಸದಸ್ಯರ ಅಭಿಮತ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ- ಪದವಿ ವಿದ್ಯಾರ್ಥಿಗಳಿಗೆಂದೇ ರೂಪಿಸಿದ್ದ ಒಂದು ಕಾರ್ಯಾಗಾರ.

ಕಾರ್ಯಕ್ರಮದ ರೂವಾರಿ ನೆಚ್ಚಿನ ಕತೆಗಾರ ಹಾಗೂ ಅವಿರತ ಸದಸ್ಯ ವಸುಧೇಂದ್ರ. ಇವರು ಸುರತ್ಕಲ್ ಆರ್.ಇ.ಸಿ ಯಲ್ಲಿ ಇಂಜಿನಿಯರಿಂಗ್  ಪದವಿಯಲ್ಲಿ  ಮೊದಲನೇ ರ‍್ಯಾಂಕ್ ಗಳಿಸಿ ನಂತರ ಬೆಂಗಳೂರಿನ ಖ್ಯಾತ ಭಾರತೀಯ ವಿಜ್ಞಾನ ಮಂದಿರದಲ್ಲಿ ಎಮ್.ಟೆಕ್ ಪದವಿಯನ್ನು ಗಳಿಸಿ, ಸಾಫ್ಟ್ ವೇರ್ ಕ್ಷೇತ್ರದಲ್ಲಿ ವೈಸ್ ಪ್ರೆಸಿಡೆಂಟ್ ಸ್ಥಾನಕ್ಕೇರಿ, ಈಗ ವಿದ್ಯಾರ್ಥಿಗಳ ತರಬೇತಿ, ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಕಾರ್ಯಾಗಾರದ ಉದ್ದೇಶ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದಿಂದ ವೃತ್ತಿ ಜೀವನದೆಡೆಗೆ ತಿಳುವಳಿಕೆ,  ತಾವು ಅಭ್ಯಸಿಸುತ್ತಿರುವ ವಿಷಯಕ್ಕೂ ಅದರ ಬಳಕೆಗೂ ನಡುವೆ ಇರುವ ಅಂತರ, ವೃತ್ತಿ ಕ್ಷೇತ್ರದಲ್ಲಿರುವ ಸವಾಲುಗಳು, ವಿದ್ಯಾರ್ಥಿ ದಿಸೆಯಲ್ಲಿಯೇ ಮುಂದಿನ ಜೀವನಕ್ಕೆ ಬೇಕಾಗಿರುವ ತಯಾರಿ, ಸೂಕ್ತ ಮನಸ್ಥಿತಿ ಇನ್ನಿತರೇ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿಕರ ರೀತಿಯಲ್ಲಿ ವಸುಧೇಂದ್ರ ಅವರು ತಿಳಿಸಿಕೊಟ್ಟರು.

೪೦ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸುವ ಅವಕಾಶವಿತ್ತು. ಯಾವುದೇ ಪದವಿ ಶಿಕ್ಷಣ ಪಡೆಯುತ್ತಿರುವ ೧೮-೨೦ ರ ವಯೋಮಾನದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಈ ಕಾರ್ಯಾಗಾರ ಸೂಕ್ತವಾಗಿತ್ತು.


Sunday, June 2, 2013

'ಕೂರ್ಮಾವತಾರ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ

ಸ್ನೇಹಿತರೆ,

ಜೂನ್ ೨ ಭಾನುವಾರ ಮಧ್ಯಾಹ್ನ 3.30ಕ್ಕೆ  ಅವಿರತ ಪ್ರತಿಷ್ಠಾನದಿಂದ  ಖ್ಯಾತ ನಿರ್ದೇಶಕರಾದ   ಗಿರೀಶ್ ಕಾಸರವಳ್ಳಿ ಯವರ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ    "ಕೂರ್ಮಾವತಾರ " ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಳ್ಳಲಾಗಿತ್ತು.

ಉಪಸ್ಥಿತಿ: ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ

ಚಿತ್ರ : ಕೂರ್ಮಾವತಾರ
ನಿರ್ದೇಶನ : ಗಿರೀಶ್ ಕಾಸರವಳ್ಳಿ
ಪಾತ್ರವರ್ಗ : ಶಿಕಾರಿಪುರ ಕೃಷ್ಣಮೂರ್ತಿ, ಹರೀಶ್ ರಾಜ್, ಅಪೂರ್ವ ಕಾಸರವಳ್ಳಿ, ಚೆಸ್ವ
ಸಂಗೀತ : ಐಸಾಕ್ ಥಾಮಸ್

ದಿನಾಂಕ  : 2 ಜೂನ್ 2013 ಭಾನುವಾರ
ಸಮಯ : ಮಧ್ಯಾಹ್ನ 3.30ಕ್ಕೆ
ಸ್ಥಳ : ಕೆ.ಎಚ್.ಕಲಾಸೌಧ  ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ

ಚಿತ್ರ ಸಾರಾಂಶ-
ಸರ್ಕಾರಿ ಕಛೇರಿಯೊಂದರಲ್ಲಿ ಗುಮಾಸ್ತನಾಗಿರುವ ರಾಮರಾಯರು ನಿವೃತ್ತಿಯ ಅಂಚಿನಲ್ಲಿದ್ದಾರೆ.  ಇಷ್ಟು ವರ್ಷಗಳಜೀವನದಲ್ಲಿ ರಾಯರು ಇತರರೆಲ್ಲರಂತೆ ಜೀವನವನ್ನು ಸಮಾರಂಭ, ಸಿನಿಮಾ, ಪ್ರವಾಸ ಎಂದು ಆಸ್ವಾದಿಸಿಲ್ಲ,ಸಂಸಾರ-ಸಂಬಂಧಗಳಿಗೆ ಅಂಟಿಕೊಂಡವರಲ್ಲ. ಹೆಂಡತಿ,ಮಕ್ಕಳ ಮೇಲಿನ ಪ್ರೀತಿ, ಮಮತೆಗಳಿಗೂ ಮನಸ್ಸು ಮಾಡದೆನಿರಂತರ ದುಡಿಮೆಯಿಂದ ಒಂದು ಬಗೆಯ ಯಾಂತ್ರಿಕ ಜೀವನದಲ್ಲಿ ತೃಪ್ತರಾದವರು.  ಹೆಂಡತಿ ಸತ್ತಾಗ ಕಣ್ಣೀರುಹಾಕದಷ್ಟು ನಿರ್ಭಾವುಕರು.ನೋಡಲು ಗಾಂಧೀಜಿಯಂತೆ ಕಾಣುತ್ತಾರೆ ಎನ್ನುವ ಒಂದೇ ಕಾರಣಕ್ಕೆ, ಮೆಗಾ ಧಾರಾವಾಹಿಯ 'ಗಾಂಧೀ' ಪಾತ್ರಇವರನ್ನು ಹುಡುಕಿಕೊಂಡು ಬರುತ್ತದೆ.  ಆಫೀಸಿನ ಕೆಲಸವನ್ನುಳಿದು ಇತರೆ ಯಾವುದೇ ವಿಷಯದಲ್ಲೂ ಆಸಕ್ತಿ ಇಲ್ಲದರಾಯರು, ಮೊದಲು ಈ ಅವಕಾಶವನ್ನು ತಿರಸ್ಕರಿಸಿದರೂ, ಆನಂತರದಲ್ಲಿ ಅಭಿನಯಿಸಲು ಒಪ್ಪಿ ಕೊಳ್ಳುತ್ತಾರೆ. 'ಗಾಂಧೀ' ಪಾತ್ರ ಮಾಡುತ್ತಾ, ಗಾಂಧೀ ಜೀವನ ಕ್ರಮಕ್ಕೂ, ತಮ್ಮ ಜೀವನಕ್ಕೂ ಇರುವ ಸಾಮ್ಯತೆ, ವ್ಯತ್ಯಾಸಗಳನ್ನುಕಂಡುಕೊಳ್ಳುವ ರಾಯರು, ದಿನಗಳೆದಂತೆ ಗಾಂಧೀಜಿಯ ಆದರ್ಶ, ತತ್ತ್ವ, ಸಂಯಮವನ್ನು ತಮ್ಮ ಬದುಕಿನಲ್ಲಿತಂದುಕೊಳ್ಳುವ ಪ್ರಯತ್ನಪಟ್ಟಾಗ ಅವರು ಆಫೀಸಿನಲ್ಲಿ, ಶೂಟಿಂಗ್ ನಲ್ಲಿ, ಸಾರ್ವಜನಿಕವಾಗಿ ಎದುರಿಸುವಸವಾಲುಗಳೇನು? ಸಂಸಾರದಲ್ಲಿ ಭುಗಿಲೇಳುವ ಸಮಸ್ಯೆಯೇನು?!  ವೈಯಕ್ತಿಕವಾಗಿ ಅವರಲ್ಲಿ ಉಂಟಾಗುವತಳಮಳಗಳೇನು? ಹೀಗೆ ಎದುರಾಗುವ ಸಂದರ್ಭಗಳನ್ನು ಮೀರಿ ರಾಯರು ಮುನ್ನಡೆಯುತ್ತಾರಾ?