Thursday, May 12, 2016

ಅವಿರತ ಶಿಕ್ಷಣ ವರ್ಷ 2016 – ಚಿಕ್ಕಮುದವಾಡಿ ಪ್ರೌಢಶಾಲೆಯ ಒಂದು ಅವಲೋಕನ


ಅವಿರತವಾಗಿ ವರ್ಷವಿಡೀ ಸಮಾಜಮುಖಿ ಕಾರ್ಯಕ್ಷೇತ್ರವನ್ನು ತನ್ನದಾಗಿಸಿಕೊಂಡಿರುವ ಅಪರೂಪದ ಸಂಸ್ಥೆ, ’ಅವಿರತ ಪ್ರತಿಷ್ಠಾನ’.  ಈ ಸಂಸ್ಥೆಯ ಒಂದು ಪ್ರಮುಖ ಕಾರ್ಯಸೂಚಿಯಾದ ’ಶಿಕ್ಷಣ’, ವರ್ಷದಿಂದ ವರ್ಷಕ್ಕೆ ಹೊಸ ಹೊಸ ಧ್ಯೇಯ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ’ಅವಿರತ’ ಕಳೆದ ಏಳೆಂಟು ವರ್ಷಗಳಿಂದ ನೂರಕ್ಕೂ ಹೆಚ್ಚು ಶಾಲೆಗಳ ಹತ್ತಾರು ಸಾವಿರ ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುವ ಕಾರ್ಯವನ್ನು ಕರ್ನಾಟಕದಾದ್ಯಂತ ಮಾಡುತ್ತಿದೆ.  ಪ್ರತಿ ವರ್ಷವೂ ಶಾಲಾ ಪ್ರಾರಂಭದ ವೇಳೆ ಹಿತೈಷಿಗಳುಸಹೃದಯರಿಂದ ದೇಣಿಗೆ ಸಂಗ್ರಹಿಸಿನಾವೇ ಖುದ್ದಾಗಿ ಮಕ್ಕಳ ಕೈಗೆ ಪುಸ್ತಕ ತಲುಪಿಸಿ ಬರುವುದೇ ನಮ್ಮ ಹೆಗ್ಗಳಿಕೆ.

’ಅವಿರತ’ ಪ್ರತಿ ಬಾರಿ ಪ್ರತಿ ಶಾಲೆಗೂ ಎಡತಾಕಿದಾಗಲೂ ಗ್ರಾಮೀಣ ಶಾಲೆಗಳ / ಶಿಕ್ಷಕರ / ಮಕ್ಕಳ ಒಂದೊಂದು ಸಮಸ್ಯೆಗಳು ಗೋಚರವಾಗತೊಡಗಿದವು.  ಸರ್ಕಾರದ ಬೆಂಬಲವಿದ್ದಾಗ್ಯೂಶಿಕ್ಷಕರ ಬದ್ದತೆಯ ಜೊತೆಗೂ ಪೋಷಕರ ಆರ್ಥಿಕ ಹಾಗೂ ಪರಿಸರದ ಕಾರಣಗಳಿಂದ ಬೇರು ಮಟ್ಟದಲ್ಲೇ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಅರಿವಾಗ ತೊಡಗಿತು.  ಈ ಸಮಸ್ಯೆಸವಾಲುಗಳನ್ನೆದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಶಾಲಾ ಮಕ್ಕಳಿಗೆ ಯಾವ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಅನ್ನುವ ಯೋಚನೆ, ’ಅವಿರತ’ದ ಮನಸ್ಸಿನಲ್ಲಿ ಮೊಳಕೆಯೊಡೆದಾಗ ಪ್ರಾರಂಭವಾದದ್ದೇ ಆಪ್ತ ಸಮಾಲೋಚನೆ / ಶಿಕ್ಷಣ ಮಾರ್ಗದರ್ಶನ ಎನ್ನುವ ಮಾರ್ಗಗಳು. 

ಈ ಹಿಂದೆ ಕೆಲವು ಶಾಲೆಗಳಲ್ಲಿ ಮಾರ್ಗದರ್ಶನ ಕಾರ್ಯಕ್ರಮ ಮಾಡಿ ಅನುಭವವಿದ್ದ ಕಾರ್ಯಕರ್ತರು ನಮ್ಮಲ್ಲೇ ಹಲವರಿದ್ದರು.  ಹಿಂದಿನ ಆ ಕಾರ್ಯಕ್ರಮಗಳೆಲ್ಲಾಒಂದು ದಿನದ ಅಥವಾ ಹೆಚ್ಚೆಂದರೆ ಎರಡು ದಿನಗಳ ಮಟ್ಟಿಗಿನ ಕಾರ್ಯಕ್ರಮಗಳಾಗಿದ್ದವು.  ಆದರೆಈ ಬಾರಿ ’ಅವಿರತ’ ತಂಡವು ಈ ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮವನ್ನು ಬೇರೆಯದೇ ರೀತಿಯಲ್ಲಿ ಜಾರಿಗೊಳಿಸಲು ಚಿಂತಿಸಿತ್ತು.  ಅದೇನೆಂದರೆ, ’ಮಾರ್ಗದರ್ಶನ’ದ ಅವಶ್ಯಕತೆ ಇರುವ ಒಂದು ಶಾಲೆಯನ್ನು ಗುರುತಿಸಿಆ ಶಾಲೆಯೊಂದಿಗೆ ಸಂಪೂರ್ಣ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ಆಪ್ತ ಸಮಾಲೋಚನೆಮಾರ್ಗದರ್ಶನಪಠ್ಯೇತರಪಠ್ಯಪೂರಕ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡುವ ಇಚ್ಚೆಗುರಿ ಹೊಂದಿತ್ತು.  ಒಟ್ಟೂ ಕಾರ್ಯಕ್ರಮದ ಸ್ವರೂಪ ಹಾಗೂ ಪ್ರಾಮುಖ್ಯತೆಯ ಅರಿವಿನೊಂದಿಗೆ ಹಾಗೂ ಸಾಕಷ್ಟು ಪೂರ್ವಭಾವಿ ತಯಾರಿಗಳೊಂದಿಗೆ ’ಅವಿರತ ಪಡೆ’ ಸಶಕ್ತ ತರಬೇತಿ ನೀಡಲು ಮುಂದಾಯಿತು.
        
    2015-16 ನೇ ಸಾಲಿನಲ್ಲಿ ಕೆಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಮಾಡಲು ಮೊದಲು ಆಯ್ಕೆ ಮಾಡಿದ್ದುಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ಗ್ರಾಮದ ಪ್ರೌಢಶಾಲೆಯನ್ನು.  ಇಲ್ಲಿ 8, 9 ಹಾಗೂ 10ನೇ ತರಗತಿಗಳು ಸೇರಿ ಒಟ್ಟು 276 ವಿದ್ಯಾರ್ಥಿಗಳಿದ್ದಾರೆ.  ಕೇವಲ 10ನೇ ತರಗತಿಯೊಂದರಲ್ಲೇ 107 ಮಕ್ಕಳಿದ್ದಾರೆ.  ನಮ್ಮ ಮೊದಲ ಭೇಟಿ ದಿನಾಂಕ 10-07-2015 ರಂದು ಅಷ್ಟೂ 276 ವಿದ್ಯಾರ್ಥಿಗಳಿಗೆ ನೋಟ್ ಬುಕ್ ಕೊಡುವ ಕಾರ್ಯಕ್ರಮವಾದರೆಎರಡನೇ ಭೇಟಿದಿನಾಂಕ 01-08-2015 ರಂದು ವಿದ್ಯಾರ್ಥಿಗಳ ಜೊತೆಗಿನ ಆಪ್ತ ಸಮಾಲೋಚನೆಯಾಗಿತ್ತು.  ಈ ಕಾರ್ಯಕ್ರಮವು ಬಹುತೇಕ ಮಕ್ಕಳಲ್ಲಿ ಸ್ವಲ್ಪ ವಿಶ್ವಾಸವನ್ನು ಚಿಗುರುವಂತೆ ಮಾಡಿತ್ತು.

ಆಪ್ತ ಸಮಾಲೋಚನೆ:

            ದಿನಾಂಕ 01-08-2015, ಶನಿವಾರ ಒಟ್ಟು 22 ಜನ ಅವಿರತ ಕಾರ್ಯಕರ್ತರುಗಂಟೆಗೆ ಶಾಲೆಗೆ ತಲುಪಿ ಒಬ್ಬೊಬ್ಬರೂ 21 ಮಕ್ಕಳನ್ನು ಗುಂಪು ಮಾಡಿEnglish Communication ಬಗ್ಗೆವಿವಿಧ ವೃತ್ತಿಗಳಹುದ್ದೆಗಳ ಬಗ್ಗೆಅವರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.  ಒಂದು ತಂಡವು ಪೋಷಕರ ಜೊತೆ ಸಭೆ ನಡೆಸಿ ಮಕ್ಕಳ ಜೊತೆಗಿನ ಒಡನಾಟದ ಬಗ್ಗೆ ಮಾಹಿತಿ ನೀಡಿದರು.  ಕೊನೆಗೆ ಅವರೆಲ್ಲರಿಮ್ದ ವೈಯಕ್ತಿಕವಾಗಿ feedback ತೆಗೆದುಕೊಳ್ಳಲಾಯಿತು.  ಇಲ್ಲಿ ನಮಗಾದ ಅನುಭವ ವಿಶೇಷವಾಗಿತ್ತು.  ಪ್ರೌಢಶಾಲಾ ಮಟ್ಟದಲ್ಲಿ ಕನ್ನಡದಲ್ಲಿ ಕಾಗುಣಿತಅಕ್ಷರದೋಷವಾಕ್ಯರಚನೆ ಮುಂತಾದ ಸಾಮಾನ್ಯ ಸಮಸ್ಯೆಗಳಿಂದ ಮೊದಲುಗೊಂಡುದಿನವೂ 5 , 6 ಕಿಲೋಮೀಟರ್ ನಡೆದು ಶಾಲೆಗೆ ಬರಬೇಕಾದಂತಹ ಹತ್ತಾರು ಸ್ಥಳೀಯ ಸಮಸ್ಯೆಗಳಿದ್ದವು.  ಆದರೆಅವೆಲ್ಲವನ್ನೂ ಮೀರಿದ ಅದಮ್ಯ ಉತ್ಸಾಹ ಆ ಮಕ್ಕಳಲ್ಲಿತ್ತು.  ನಮಗೆ ಪ್ರೇರಣೆಯಾಗಿದ್ದೂ ಕೂಡ ಅದೇ ’ತಗ್ಗದಿರುಕುಗ್ಗದಿರು’ ಮನೋಭಾವ.  ಈ ಅನುಭವಗಳ ಜೊತೆ ಶಿಕ್ಷಕರೊಂದಿಗೂ ದೀರ್ಘ ಮಾತುಕತೆ ನಡೆಸಿದಾಗಮಕ್ಕಳಿಗೆ ಅವಶ್ಯಕವಾಗಿ ಬೇಕಾದ ಪಠ್ಯೇತರ ಚಟುವಟಿಕೆಗಳ ಮೂಲಕ ಪ್ರತಿ ಮಗುವಿನಲ್ಲಿರಬೇಕಾದ ಆತ್ಮ ಸ್ಥೈರ್ಯವನ್ನು ಹುರಿದುಂಬಿಸುವಲ್ಲಿ ಅವಿರತ ಸಹಾಯ ಮಾಡಬಹುದೆಂದು ಮನವರಿಕೆಯಾಯಿತು.

ಕ್ರೀಡಾ ದಿನ:

ಅಲ್ಲಿನ ಉತ್ಸಾಹಿ ಶಿಕ್ಷಕರು ನಮ್ಮ ಪ್ರಯತ್ನಗಳಿಗೆ ಬೆನ್ನೆಲುಬಾಗಿ ನಿಂತರು.  ಅವರ ಕೋರಿಕೆಯಂತೆ ಆ ಮಕ್ಕಳಿಗೆ sportswear (ಕ್ರೀಡಾ ಸಮವಸ್ತ್ರ)ಗ್ರಂಥಾಲಯಕ್ಕೆ ಪುಸ್ತಕಗಳು ಮತ್ತು ಕ್ರೀಡಾ ಸಲಕರಣೆಗಳ ಅವಶ್ಯಕತೆಯಿತ್ತು.  ’ಅವಿರತ’ದ ಉತ್ಸಾಹಿ ಸದಸ್ಯರುOracle ಕಂಪೆನಿಯ CSR ಕಾರ್ಯಕ್ರಮದ ಮೂಲಕ ಒಂದೇ ವಾರದಲ್ಲಿ ಸುಮಾರು 25,000 ರೂಪಾಯಿಗಳ ದೇಣಿಗೆಯಿಂದ ಆ ಶಾಲೆಯು ಕೇಳಿದ ಅಷ್ಟೂ ಅವಶ್ಯಕತೆಗಳನ್ನು ಪೂರೈಸಲು ತಯಾರಾಯಿತು.  ದಿನಾಂಕ12-09-2015 ರಂದು (ಕೇವಲ ಮೂರು ದಿನದ ಹಿಂದೆ ಕಣಕಣದಲ್ಲೂ ದೇಶಭಕ್ತಿ ಹೊಂದಿದ್ದ ಅಬ್ದುಲ್ ಕಲಾಂ ಅವರು ನಮ್ಮೆಲರನ್ನೂ ಅಗಲಿದ್ದರು).  ಆ ಶಾಲೆ ನಮ್ಮ ಕ್ರೀಡಾ ಪರಿಕರಗಳೆಲ್ಲವನ್ನೂ ಸಮರ್ಪಿಸಿಕೊಳ್ಳುವುದರ ಜೊತೆಗೆ ಅರ್ಥಪೂರ್ಣ ’ಕ್ರೀಡಾ ದಿನ’ವನ್ನು ಆಚರಿಸಿಕೊಂಡಿತು.  ಇಡೀ ದಿನ ’ಅವಿರತ’ದ ಮಾಜಿ ರಾಷ್ಟ್ರೀಯ ಆಟಗಾರರು ಮಕ್ಕಳಿಗೆ ಆಟೋಟಗಳ ಪರಿಚಯ ಮಾಡಿಕೊಟ್ಟರು.  ಅಂದು ಓದಿನಲ್ಲಿ ಹಿಂದುಳಿದಿದ್ದ ಆದರೆ ಅಕ್ಷರಶ: ಕ್ರೀಡೆಯಲ್ಲಿ ಮುಂದಿದ್ದ ಹಲವಾರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವಲ್ಲಿ ಸಹಕಾರಿಯಾಯಿತು.


ವೃತ್ತಿ / ಶಿಕ್ಷಣ ಮಾರ್ಗದರ್ಶನ:
       ಈ ಮಧ್ಯೆಮಕ್ಕಳನ್ನು ನೀವು ಮುಂದೇನಾಗಬೇಕು ಎಂದು ಕೇಳಿದಾಗ ಬಹುತೇಕ ಮಕ್ಕಳು ಹೇಳಿದ್ದು, ’ಪೋಲೀಸ್ಎಂದು.  ಇದಕ್ಕೆಂದೇ ನಮ್ಮ ಕಾರ್ಯಕ್ರಮಗಳಲ್ಲೊಂದು ದಿನ ಕನಕಪುರ ಇನ್ಸ್ ಪೆಕ್ಟರ್ ಮತ್ತು ಸಬ್ ಇನ್ಸ್ ಪೆಕ್ಟರ್ ಅವರನ್ನು ಆಮಂತ್ರಿಸಿ, ಅವರಿಂದ ಮಕ್ಕಳಿಗೆ ಪೋಲೀಸ್ ಇಲಾಖೆಯಲ್ಲಿನ ವಿವಿಧ ಹುದ್ದೆಗಳು, ಅದಕ್ಕೆ ಬೇಕಾಗುವ ಕನಿಷ್ಠ ವಿದ್ಯಾರ್ಹತೆ, ಎಲ್ಲದರ ಬಗ್ಗೆ ಸವಿಸ್ತಾರವಾಗಿ ವಿಶದಪಡಿಸಲಾಯಿತು.

’ವಿಜ್ಞಾನ ವಿಸ್ಮಯ’
’ಅವಿರತ’ದ ಮೂಲ ಸೆಲೆ ಇರುವುದೇ ಸರಿಸುಮಾರು 30ರ ಆಚೀಚಿನ ಸೇವಾಬದ್ದತೆಯುಳ್ಳ ಯುವಕ ಯುವತಿಯರಲ್ಲಿ.  ಬಹುತೇಕರು ವಿಜ್ಞಾನದ ಉನ್ನತ ಅಧ್ಯಯನದ ಮೂಲಕವೇ ವೃತ್ತಿ ಹೊಂದಿರುವಂಥವರು.  ಈ ಇಂತಹ ಕಾರ್ಯಕರ್ತರು ಕಟ್ಟಿದ ಪಡೆಯೇ ’ಅವಿರತ ವಿಜ್ಞಾನ ವಿಸ್ಮಯ’.  ಈ ಪಡೆ ಜವಾಹರಲಾಲ್ ಪ್ಲಾನಿಟೋರಿಯಂವಿಶ್ವೇಶ್ವರಯ್ಯ ಮ್ಯೂಸಿಯಂಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂತಾದ ಸಂಸ್ಥೆಗಳೊಡಗೂಡಿ ತಾವೇ ಸ್ವಯಂ ತರಬೇತಿ ಹೊಂದಿ ಮಕ್ಕಳಿಗೆ ವಿಜ್ಞಾನದ ರುಚಿ ಹತ್ತಿಸಲು ತಯಾರಾದ ಸಶಕ್ತಕೂಟ.  ದಿನಾಂಕ 08-10-2015 ರಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಇಬ್ಬರು ವಿಜ್ಞಾನಿಗಳ ಜೊತೆಗೂಡಿ ಒಂದು ದಿನದ ವಿಜ್ಞಾನ ಕಾರ್ಯಾಗಾರವನ್ನು ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಅನೇಕ ಪ್ರಯೋಗಗಳನ್ನು ಮಾಡಿ ತೋರಿಸಿತು.  ಕಾರ್ಯಕ್ರಮ ಮುಗಿದ ಮೇಲೆ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಗಳು ನಮ್ಮ ಪ್ರಯತ್ನದ ಸಾರ್ಥಕತೆಗೆ ಸಾಕ್ಷಿಯಂತಿದ್ದವು.

ಕೌಶಲ್ಯ ತರಬೇತಿ

        ಶಿಕ್ಷಕರ ಮನವಿಯ ಮೇರೆಗೆ ಮಾಡಿದ ಇನ್ನೊಂದು ಅವಶ್ಯಕ ಕಾರ್ಯಕ್ರಮ ಅಥವಾ ತರಬೇತಿ, memory techniques training’.  ನಮ್ಮ ಸದುದ್ದೇಶವನ್ನು ಅರ್ಥ ಮಾಡಿಕೊಂಡ ಪ್ರಖ್ಯಾತ ತಜ್ಞ ರಮೇಶ್ ಬಾಬು ಅವರು ತುಮಕೂರಿನಿಂದ ತಮ್ಮದೇ ಸ್ವಂತ ಖರ್ಚಿನಲ್ಲಿ ಶಾಲೆಗೆ ಭೇಟಿ ನೀಡಿಗಂಟೆಗಳ ಕಾಲ ನೆನಪಿನ ಶಕ್ತಿಯ ಬಗ್ಗೆಉತ್ತರ ಬರೆಯುವ ಯುಕ್ತಿಗಳ ಬಗ್ಗೆದಿನಚರಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ನೆರವಾದರು.

 ಕನ್ನಡ ಅಭಿವೃದ್ದಿ ಪ್ರಾಧಿಕಾರವು ಗ್ರಾಮೀಣ ಶಾಲೆಗಳಿಗೆಂದೇ ಕೊಡಮಾಡುವ ಅನುದಾನದಲ್ಲಿ ಅವಶ್ಯಕವಾಗಿ ಬೇಕಾಗುವ ಪೀಠೋಪಕರಣಗಳನ್ನು ಒದಗಿಸುವ ಪ್ರಯತ್ನವೂ ನಡೆಯುತ್ತಿದೆ.  ಇದರ ಫಲವಾಗಿಈ ಶಾಲೆಗೆ ಅಗತ್ಯವಿರುವ ಪೀಠೋಪಕರಣಗಳು ಸದ್ಯದಲ್ಲೇ ದೊರಕಲಿವೆ

     ಕಳೆದ ವಾರ ಅಲ್ಲಿನ ಶಿಕ್ಷಕರು ಫೋನ್ ಮಾಡಿ, ’ಸಾರ್, ’ಅವಿರತ’ದ ಕಾರಣದಿಂದ ಎಲ್ಲಾ ಮಕ್ಕಳೂಎಲ್ಲಾ ತರಗತಿಗಳಲ್ಲೂ Special Classes (ವಿಶೇಷ ತರಗತಿಗಳು) ಗಳಿಗೂ ಹಾಜರಾಗುತ್ತಿದ್ದಾರೆ. ನೀವು ಹುಟ್ಟು ಹಾಕಿದ ಈ ಹುರುಪು ಒಳ್ಳೆಯ ಫಲಿತಾಂಶ ತರುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.  ಈ ಶನಿವಾರ26-03-2015 ರಂದು Hall Ticket ಕೊಟ್ಟು ಹರಸಿ ಕಳುಹಿಸುತ್ತಿದ್ದೇವೆ.  ನೀವು ಬಂದು ಮಕ್ಕಳನ್ನು ಮಾತನಾಡಿಸಿದರೆ ಮಕ್ಕಳಲ್ಲಿ  ಇನ್ನೂ ಸ್ವಲ್ಪ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬನ್ನಿ’ ಎಂದರು.  ಇಲ್ಲವೆನ್ನಲು ಮನಸ್ಸಾಗಲಿಲ್ಲ.  ’ಅವಿರತ’ದ ಮತ್ತೊಬ್ಬ ವೃತ್ತಿಪರ ಮಾರ್ಗದರ್ಶಕರೊಬ್ಬರೊಂದಿಗೆ ಹೋಗಿ ಮಕ್ಕಳನ್ನು ಇನ್ನಷ್ಟು ಹುರಿದುಂಬಿಸಿ ಬಂದಿದ್ದೇವೆ.  ಅಂದು ಶಾಲೆಗೆ ಭೇಟಿ ನೀಡಿದ ಎಲ್ಲಾ ಅವಿರತದ ಸದಸ್ಯರಿಗೂ ಮಕ್ಕಳು ಹಾಗೂ ಶಿಕ್ಷಕರು ಸೇರಿ ಅನಿರೀಕ್ಷಿತವಾಗಿ ಸನ್ಮಾನವನ್ನೂ ಮಾಡಿದರು.   ಆ ಮಕ್ಕಳಿಗೆ ನಿಮ್ಮೆಲ್ಲರ ಹಾರೈಕೆ ಇರಲಿ.


ಶಿವಪ್ರಕಾಶ್
ಅವಿರತ

Wednesday, April 20, 2016

ರಾಜ್ ರಾಗ

ಸ್ನೇಹಿತರೆ,
ರಾಜ್ ರಾಗ, ಇದು ಅವಿರತ ಪ್ರಸ್ತುತ ಪಡಿಸುತ್ತಿರುವ 2016 ರ 4 ನೇ ಕಾರ್ಯಕ್ರಮ, ನಮ್ಮ 4 ನೇ ಹೆಜ್ಜೆ 👣🎉 ...!
ಅವಿರತವು ಕನ್ನಡ ನಾಡಿನ ಅತ್ಯಾಪರೂಪದ ಅಪರಂಜಿ, ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ|| ರಾಜಕುಮಾರ ಅವರನ್ನು ಮೆಲುಕು ಹಾಕುವ ವಿಶೇಷ ಸಂಗೀತ ಸಂಜೆಯನ್ನು ಭ್ರಮೆ ತಂಡದ ಸಹಯೋಗದಲ್ಲಿ ನಿಮ್ಮೆಲ್ಲರ ಮನರಂಜಿಸಲು ಮತ್ತೆ ಸಿದ್ಧವಾಗಿದೆ.
ವಿಶೇಷ ಅತಿಥಿ: ಶ್ರೀ ರಾಜನ್, ಸಂಗೀತ ನಿರ್ದೇಶಕರು.
ದಿನಾಂಕ : ಎಪ್ರಿಲ್ 24
ಸ್ಥಳ : ಕೆ. ಇ. ಎ ಪ್ರಭಾತ ರಂಗಮಂದಿರ
(Karnataka Engineers Academy, Basaveshwara Nagar)
ಸಮಯ : ಸಂಜೆ 4:30 ಕ್ಕೆ
ಬನ್ನಿ, ರಾಜ್ ರಾಗದಲ್ಲಿ, ಸಡಗರದಲ್ಲಿ ಭಾಗಿಯಾಗಿ...
ನಿಮ್ಮ ಉಪಸ್ಥಿತಿ & ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.

Friday, March 11, 2016

ಅವಿರತ ಜೀವ ನಿಧಿ..

ಅವಿರತದ ಪ್ರಮುಖ ಕಾರ್ಯಕ್ಷೇತ್ರಗಳಲ್ಲಿ "ಆರೋಗ್ಯ"ವು ಕೂಡ ಒಂದು. ಪ್ರತಿ ವರ್ಷ, ಅವಿರತವು ಹಳ್ಳಿಯ ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತ ಬಂದಿದೆ ಹಾಗೇ ಮುಂದುವರೆಸುತ್ತೆ ಕೂಡ. ಮಕ್ಕಳ ಶೈಕ್ಷಣಿಕ ಕಾಳಜಿಯ ಜೊತೆಗೆ ಅವರ ಆರೋಗ್ಯದ ಬಗ್ಗೆಯೂ ಆಸ್ಥೆ ವಹಿಸುತ್ತಿದೆ. ಈಗ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ...
ನಮ್ಮ ಕುಟುಂಬದವರೊ, ಸಂಬಂಧಿಕರೊ, ಸ್ನೇಹಿತರೊ ಅಥವಾ ನೆರೆಹೊರೆಯವರೊ ಅನಾರೋಗ್ಯ ಕಾರಣದಿಂದ ಬಳಲುತಿದ್ದಾಗ ಅವಶ್ಯಕ  ರಕ್ತ ಲಭ್ಯವಿಲ್ಲದೆ ಪರಿದಾಡಿದ, ತೊಂದರೆಗೊಳಗಾದ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿವೆ.. ಅನೇಕ ಬ್ಲಡ್ ಬ್ಯಾಂಕ್ ಗಳಿದ್ದೂ, ಸ್ನೇಹಿತ & ಸಂಬಂಧಿಕರ ನೆಟ್‌ವರ್ಕ್ ಇದ್ದೂ ರಕ್ತವನ್ನು ಹೊಂದಿಸದ ಘಟನೆಗಳಿವೆ. ಇಂತಹ ಪರಿಸ್ಥಿತಿಗಳಿಂದ ಹೊರಬರಲು ಅವಿರತವು ಮೊಬೈಲ್ ಅಪ್ಲಿಕೇಶನ್ ಒಂದನ್ನು ಸಿದ್ದಪಡಿಸುತ್ತಿದೆ. ಅವಿರತ ಸದಸ್ಯ ಶ್ರೀಕಾಂತ್ ಚಕ್ರವರ್ತಿ ಈ ಅಪ್ಲಿಕೇಶನ್ ಅನ್ನು ಸಿದ್ಧಪಡಿಸುತ್ತಿದ್ದು ಸದ್ಯದಲ್ಲೇ ಜನರಿಗೆ ತಲುಪಲಿದೆ. 
ರಕ್ತ ದಾನವನ್ನು ಮಾಡಲಿಚ್ಛಿಸುವವರು, ನಮ್ಮ ರಕ್ತದಾನಿಗಳ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಬಯಸುವವರು  blooddonor.aviratha@gmail.com ಗೆ ತಮ್ಮ ಹೆಸರು, ವಿಳಾಸ ಮತ್ತು ಫೋನ್ ನಂಬರ್ ವಿವರಗಳನ್ನು ಕಳುಹಿಸಬಹುದು.  ಅಗತ್ಯ ಸಮಯದಲ್ಲಿ ನಿಮ್ಮನ್ನು ಸಂಪರ್ಕಿಸುತ್ತೇವೆ.

ಬನ್ನಿ,
ರಕ್ತವನ್ನು ನೀಡೋಣ,
ಜೀವವನ್ನು ಉಳಿಸೋಣ,
ನಗುವನ್ನು ಮೂಡಿಸೋಣ..!

ಅವಿರತದ ಜೊತೆ ನಿಮ್ಮ ಸಹಕಾರವಿರಲಿ.

Friday, January 22, 2016

ಮಲ್ಲಿಗೆ ಪರಿಷೆ

ಸ್ನೇಹಿತರೇ,

ಮಲ್ಲಿಗೆಯ ಪರಿಮಳ ಹರಡುತ್ತಿದೆ...ಪ್ರೇಮ ವೀಣೆ ಮತ್ತೆ ಮಿಡಿಯುತ್ತಿದೆ...!! ಇದು ಮನಸುಗಳು ಅರಳುವ ಸಮಯ..

ಅವಿರತವು, ಹೊಸ ವರುಷವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ವರ್ಷದ ಮೊದಲ ಕೊಡುಗೆ ರಂಗವಲ್ಲಿಯನ್ನು ಜನಮನ ತಲುಪಿಸಿ ಯಶಸ್ವಿಯಾಗಿದೆ.

ಅದು ರಂಗಲೋಕ ಇದು ಪ್ರೇಮಲೋಕ. ಹೌದು, ಕೆ ಎಸ್ ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಪ್ರೇಮ ಕಾವ್ಯ ಸುಗ್ಗಿಯ ಜೊತೆಗೆ ಚಿಕ್ಕದಾದ ವಿಶೇಷ ಮಲ್ಲಿಗೆ ಪರಿಷೆಯನ್ನು ಪ್ರಸ್ತುತಪಡಿಸುತ್ತಿದೆ.

ವಿನಯ ನಾಡಿಗ್ ಮತ್ತು ಸಂಗಡಿಗರ ಧ್ವನಿಯಲ್ಲಿ ಅರಳಲಿವೆ ಕೆ.ಎಸ್.ಎನ್ ಅವರ ಕವನ ಮೊಗ್ಗುಗಳು..! 

ಅವಿರತ ತಂಡದಿಂದ ಪ್ರೇಮ ಕವಿಯ ಸಂಭ್ರಮವನ್ನು ವಿಭಿನ್ನವಾಗಿ ಕಟ್ಟಿಕೊಡುವ, ವಿಶೇಷ ಅನುಭವವನ್ನು ನೀಡುವ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ  ಅತ್ಯಗತ್ಯ..!

ಬನ್ನಿ, ಈ ಮಲ್ಲಿಗೆ ಪರಿಷೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ..!

ನಿಮ್ಮ,
ಅವಿರತ ತಂಡ.

Thursday, December 17, 2015

ರಂಗವಲ್ಲಿ...

ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ರಂಗ ಗೀತೆಗಳ ಕಾರ್ಯಕ್ರಮವೊಂದು,  ಮುಂದಿನ ತಿಂಗಳು ಜನವರಿ 2 ರಂದು ಎಲ್ಲ ಅಡೆತಡೆಗಳ ನೀಗಿ ನಡೆಯಲಿದೆ. ಅದೇ "ರಂಗವಲ್ಲಿ".., ವಿಶೇಷ ಸಂಗೀತ ಸಂಜೆ..!

ಇಬ್ಬರು ರಂಗಕರ್ಮಿ, ಸಾಹಿತಿ, ಕವಿಗಳಾದ ಶ್ರೀ ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ಆಯ್ದ ಅಪರೂಪದ ಮಧುರವಾದ ರಂಗ ಗೀತೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ ಉದಯೋನ್ಮುಖ ಗಾಯಕ, ನಲ್ಮೆಯ ಗೆಳೆಯ ರಾಮಚಂದ್ರ ಹಡಪದ್ ಮತ್ತು ತಂಡದವರು.

ನಮ್ಮಅವಿರತ ತಂಡದ ಮತ್ತೊಂದು ಸದಭಿರುಚಿಯ ಈ ಕಾರ್ಯಕ್ರಮಕ್ಕೆ ದೃಶ್ಯ ಕಾವ್ಯ ತಂಡದವರು ಕೈ ಜೋಡಿಸಿದ್ದಾರೆ.

ಈ ರಂಗ ಸಂಭ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ..

ಸ್ಥಳ :
ಸಂಸ ಬಯಲು ರಂಗಮಂದಿರ,
ರವೀಂದ್ರ ಕಲಾಕ್ಷೇತ್ರ ಆವರಣ,
ಜೆ.ಸಿ. ರಸ್ತೆ, ಬೆಂಗಳೂರು.

ದಿನಾಂಕ: 02 ಜನವರಿ 2016

ದಯವಿಟ್ಟು ಇಂದೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿರಿ.

ನಿಮ್ಮ ನಿರೀಕ್ಷೆಯಲ್ಲಿ,
ಅವಿರತ ತಂಡ...