ಅವಿರತ-ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. ಅವಿರತದಲ್ಲಿ ಸಾಹಿತಿಗಳಿಂದ ಹಿಡಿದು ಸಾಫ್ಟ್ ವೇರ್ ಇಂಜಿನಿಯರ್ಗಳು, ವೈದ್ಯರು, ಬುದ್ಧಿಜೀವಿಗಳು ತತ್ವಜ್ಞಾನಿಗಳು, ತಂತ್ರಜ್ಞರು, ವಿಜ್ಞಾನಿಗಳು , ನಾಗರೀಕರು, ರೈತರು, ಉದ್ಯಮಿಗಳು ಹೀಗೆ ಸಮಾಜದ ಎಲ್ಲ ವರ್ಗದ ಜನರಿಂದ ರೂಪಿತವಾಗಿದೆ. ತಾಯ್ನಾಡನ್ನು ತರ್ಕಬದ್ಧವಾಗಿ, ನ್ಯಾಯಯುತವಾಗಿ ಮುನ್ನಡೆಸಲು ಪಣತೊಟ್ಟಿರುವ ಬದಲಾವಣೆಯ ಹರಿಕಾರರಿದ್ದಾರೆ. ಬನ್ನಿ, ಅವಿರತ ತಂಡಕ್ಕೆ ನೀವೂ ಸೇರಿ, ನಮ್ಮ ಕೈ ಜೋಡಿಸಿ ಕನ್ನಡ ನಾಡು, ನುಡಿಯನ್ನು ಬೆಳೆಸೋಣ.
Friday, March 11, 2016
ಅವಿರತ ಜೀವ ನಿಧಿ..
Friday, January 22, 2016
ಮಲ್ಲಿಗೆ ಪರಿಷೆ
ಸ್ನೇಹಿತರೇ,
ಮಲ್ಲಿಗೆಯ ಪರಿಮಳ ಹರಡುತ್ತಿದೆ...ಪ್ರೇಮ ವೀಣೆ ಮತ್ತೆ ಮಿಡಿಯುತ್ತಿದೆ...!! ಇದು ಮನಸುಗಳು ಅರಳುವ ಸಮಯ..
ಅವಿರತವು, ಹೊಸ ವರುಷವನ್ನು ಭರ್ಜರಿಯಾಗಿಯೇ ಆರಂಭಿಸಿದೆ. ವರ್ಷದ ಮೊದಲ ಕೊಡುಗೆ ರಂಗವಲ್ಲಿಯನ್ನು ಜನಮನ ತಲುಪಿಸಿ ಯಶಸ್ವಿಯಾಗಿದೆ.
ಅದು ರಂಗಲೋಕ ಇದು ಪ್ರೇಮಲೋಕ. ಹೌದು, ಕೆ ಎಸ್ ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ ಸಂಭ್ರಮಕ್ಕೆ ಪ್ರೇಮ ಕಾವ್ಯ ಸುಗ್ಗಿಯ ಜೊತೆಗೆ ಚಿಕ್ಕದಾದ ವಿಶೇಷ ಮಲ್ಲಿಗೆ ಪರಿಷೆಯನ್ನು ಪ್ರಸ್ತುತಪಡಿಸುತ್ತಿದೆ.
ವಿನಯ ನಾಡಿಗ್ ಮತ್ತು ಸಂಗಡಿಗರ ಧ್ವನಿಯಲ್ಲಿ ಅರಳಲಿವೆ ಕೆ.ಎಸ್.ಎನ್ ಅವರ ಕವನ ಮೊಗ್ಗುಗಳು..!
ಅವಿರತ ತಂಡದಿಂದ ಪ್ರೇಮ ಕವಿಯ ಸಂಭ್ರಮವನ್ನು ವಿಭಿನ್ನವಾಗಿ ಕಟ್ಟಿಕೊಡುವ, ವಿಶೇಷ ಅನುಭವವನ್ನು ನೀಡುವ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ..!
ಬನ್ನಿ, ಈ ಮಲ್ಲಿಗೆ ಪರಿಷೆಯಲ್ಲಿ ಪಾಲ್ಗೊಳ್ಳಿ, ಆನಂದಿಸಿ..!
ನಿಮ್ಮ,
ಅವಿರತ ತಂಡ.
Thursday, December 17, 2015
ರಂಗವಲ್ಲಿ...
ಎಷ್ಟೋ ದಿನಗಳಿಂದ ಅಂದುಕೊಂಡಿದ್ದ ರಂಗ ಗೀತೆಗಳ ಕಾರ್ಯಕ್ರಮವೊಂದು, ಮುಂದಿನ ತಿಂಗಳು ಜನವರಿ 2 ರಂದು ಎಲ್ಲ ಅಡೆತಡೆಗಳ ನೀಗಿ ನಡೆಯಲಿದೆ. ಅದೇ "ರಂಗವಲ್ಲಿ".., ವಿಶೇಷ ಸಂಗೀತ ಸಂಜೆ..!
ಇಬ್ಬರು ರಂಗಕರ್ಮಿ, ಸಾಹಿತಿ, ಕವಿಗಳಾದ ಶ್ರೀ ಗೋಪಾಲ ವಾಜಪೇಯಿ ಹಾಗೂ ಕೆ ವೈ ನಾರಾಯಣಸ್ವಾಮಿಯವರ ಆಯ್ದ ಅಪರೂಪದ ಮಧುರವಾದ ರಂಗ ಗೀತೆಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ ಉದಯೋನ್ಮುಖ ಗಾಯಕ, ನಲ್ಮೆಯ ಗೆಳೆಯ ರಾಮಚಂದ್ರ ಹಡಪದ್ ಮತ್ತು ತಂಡದವರು.
ನಮ್ಮಅವಿರತ ತಂಡದ ಮತ್ತೊಂದು ಸದಭಿರುಚಿಯ ಈ ಕಾರ್ಯಕ್ರಮಕ್ಕೆ ದೃಶ್ಯ ಕಾವ್ಯ ತಂಡದವರು ಕೈ ಜೋಡಿಸಿದ್ದಾರೆ.
ಈ ರಂಗ ಸಂಭ್ರಮಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ..
ಸ್ಥಳ :
ಸಂಸ ಬಯಲು ರಂಗಮಂದಿರ,
ರವೀಂದ್ರ ಕಲಾಕ್ಷೇತ್ರ ಆವರಣ,
ಜೆ.ಸಿ. ರಸ್ತೆ, ಬೆಂಗಳೂರು.
ದಿನಾಂಕ: 02 ಜನವರಿ 2016
ದಯವಿಟ್ಟು ಇಂದೇ ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿರಿ.
ನಿಮ್ಮ ನಿರೀಕ್ಷೆಯಲ್ಲಿ,
ಅವಿರತ ತಂಡ...
Monday, September 21, 2015
"ನಾನು ಅವನಲ್ಲ ಅವಳು"
ಸ್ಥಳ : ಸವಿತಾ ಚಿತ್ರಮಂದಿರ (ಮಂತ್ರಿ ಮಾಲ್ ಪಕ್ಕ) ಸಂಪಿಗೆ ರಸ್ತೆ, ಮಲ್ಲೇಶ್ವರಂ ಬೆಂಗಳೂರು.



