Sunday, June 2, 2013

'ಕೂರ್ಮಾವತಾರ' ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ

ಸ್ನೇಹಿತರೆ,

ಜೂನ್ ೨ ಭಾನುವಾರ ಮಧ್ಯಾಹ್ನ 3.30ಕ್ಕೆ  ಅವಿರತ ಪ್ರತಿಷ್ಠಾನದಿಂದ  ಖ್ಯಾತ ನಿರ್ದೇಶಕರಾದ   ಗಿರೀಶ್ ಕಾಸರವಳ್ಳಿ ಯವರ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ    "ಕೂರ್ಮಾವತಾರ " ಚಿತ್ರದ ವಿಶೇಷ ಪ್ರದರ್ಶನ ಮತ್ತು ಸಂವಾದ ಹಮ್ಮಿಕೊಳ್ಳಲಾಗಿತ್ತು.

ಉಪಸ್ಥಿತಿ: ಗಿರೀಶ್ ಕಾಸರವಳ್ಳಿ, ಮನು ಚಕ್ರವರ್ತಿ

ಚಿತ್ರ : ಕೂರ್ಮಾವತಾರ
ನಿರ್ದೇಶನ : ಗಿರೀಶ್ ಕಾಸರವಳ್ಳಿ
ಪಾತ್ರವರ್ಗ : ಶಿಕಾರಿಪುರ ಕೃಷ್ಣಮೂರ್ತಿ, ಹರೀಶ್ ರಾಜ್, ಅಪೂರ್ವ ಕಾಸರವಳ್ಳಿ, ಚೆಸ್ವ
ಸಂಗೀತ : ಐಸಾಕ್ ಥಾಮಸ್

ದಿನಾಂಕ  : 2 ಜೂನ್ 2013 ಭಾನುವಾರ
ಸಮಯ : ಮಧ್ಯಾಹ್ನ 3.30ಕ್ಕೆ
ಸ್ಥಳ : ಕೆ.ಎಚ್.ಕಲಾಸೌಧ  ರಾಮಾಂಜನೇಯ ಗುಡ್ಡದ ಆವರಣ ಹನುಮಂತ ನಗರ

ಚಿತ್ರ ಸಾರಾಂಶ-
ಸರ್ಕಾರಿ ಕಛೇರಿಯೊಂದರಲ್ಲಿ ಗುಮಾಸ್ತನಾಗಿರುವ ರಾಮರಾಯರು ನಿವೃತ್ತಿಯ ಅಂಚಿನಲ್ಲಿದ್ದಾರೆ.  ಇಷ್ಟು ವರ್ಷಗಳಜೀವನದಲ್ಲಿ ರಾಯರು ಇತರರೆಲ್ಲರಂತೆ ಜೀವನವನ್ನು ಸಮಾರಂಭ, ಸಿನಿಮಾ, ಪ್ರವಾಸ ಎಂದು ಆಸ್ವಾದಿಸಿಲ್ಲ,ಸಂಸಾರ-ಸಂಬಂಧಗಳಿಗೆ ಅಂಟಿಕೊಂಡವರಲ್ಲ. ಹೆಂಡತಿ,ಮಕ್ಕಳ ಮೇಲಿನ ಪ್ರೀತಿ, ಮಮತೆಗಳಿಗೂ ಮನಸ್ಸು ಮಾಡದೆನಿರಂತರ ದುಡಿಮೆಯಿಂದ ಒಂದು ಬಗೆಯ ಯಾಂತ್ರಿಕ ಜೀವನದಲ್ಲಿ ತೃಪ್ತರಾದವರು.  ಹೆಂಡತಿ ಸತ್ತಾಗ ಕಣ್ಣೀರುಹಾಕದಷ್ಟು ನಿರ್ಭಾವುಕರು.ನೋಡಲು ಗಾಂಧೀಜಿಯಂತೆ ಕಾಣುತ್ತಾರೆ ಎನ್ನುವ ಒಂದೇ ಕಾರಣಕ್ಕೆ, ಮೆಗಾ ಧಾರಾವಾಹಿಯ 'ಗಾಂಧೀ' ಪಾತ್ರಇವರನ್ನು ಹುಡುಕಿಕೊಂಡು ಬರುತ್ತದೆ.  ಆಫೀಸಿನ ಕೆಲಸವನ್ನುಳಿದು ಇತರೆ ಯಾವುದೇ ವಿಷಯದಲ್ಲೂ ಆಸಕ್ತಿ ಇಲ್ಲದರಾಯರು, ಮೊದಲು ಈ ಅವಕಾಶವನ್ನು ತಿರಸ್ಕರಿಸಿದರೂ, ಆನಂತರದಲ್ಲಿ ಅಭಿನಯಿಸಲು ಒಪ್ಪಿ ಕೊಳ್ಳುತ್ತಾರೆ. 'ಗಾಂಧೀ' ಪಾತ್ರ ಮಾಡುತ್ತಾ, ಗಾಂಧೀ ಜೀವನ ಕ್ರಮಕ್ಕೂ, ತಮ್ಮ ಜೀವನಕ್ಕೂ ಇರುವ ಸಾಮ್ಯತೆ, ವ್ಯತ್ಯಾಸಗಳನ್ನುಕಂಡುಕೊಳ್ಳುವ ರಾಯರು, ದಿನಗಳೆದಂತೆ ಗಾಂಧೀಜಿಯ ಆದರ್ಶ, ತತ್ತ್ವ, ಸಂಯಮವನ್ನು ತಮ್ಮ ಬದುಕಿನಲ್ಲಿತಂದುಕೊಳ್ಳುವ ಪ್ರಯತ್ನಪಟ್ಟಾಗ ಅವರು ಆಫೀಸಿನಲ್ಲಿ, ಶೂಟಿಂಗ್ ನಲ್ಲಿ, ಸಾರ್ವಜನಿಕವಾಗಿ ಎದುರಿಸುವಸವಾಲುಗಳೇನು? ಸಂಸಾರದಲ್ಲಿ ಭುಗಿಲೇಳುವ ಸಮಸ್ಯೆಯೇನು?!  ವೈಯಕ್ತಿಕವಾಗಿ ಅವರಲ್ಲಿ ಉಂಟಾಗುವತಳಮಳಗಳೇನು? ಹೀಗೆ ಎದುರಾಗುವ ಸಂದರ್ಭಗಳನ್ನು ಮೀರಿ ರಾಯರು ಮುನ್ನಡೆಯುತ್ತಾರಾ?

 
No comments:

Post a Comment