Saturday, June 7, 2014

ವನಮಹೋತ್ಸವ

ಅವಿರತವು ಆರೆಕಲ್ ಸಹಯೋಗದೊಂದಿಗೆ ನೆಲೆ ನರೇಂದ್ರದಲ್ಲಿ  ಜೂನ್ಶನಿವಾರದಂದು ವನಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿತುನೆಲೆ ನರೇಂದ್ರ"- ಅನಾಥ & ಅವಕಾಶ ವಂಚಿತ ಮಕ್ಕಳಿಗೆ ಗೌರವಯುತವಾದ ಜೀವನವನ್ನು ರೂಪಿಸಿಕೊಡುವಲ್ಲಿ ಶ್ರಮಿಸುತ್ತಿರುವ ಸೇವಾ ಸಂಸ್ಥೆ.

ಲಕ್ಷ್ಮೀದೇವಿ ನಗರದಲ್ಲಿರುವ ನೆಲೆ ನರೇಂದ್ರ ಮಕ್ಕಳ ಆಶ್ರಮದಲ್ಲಿ ನಡೆದ ಈ ವನಮೋತ್ಸವದಲ್ಲಿ ನೆಲೆ-ಆರೆಕಲ್-ಅವಿರತ ಸದಸ್ಯರು-ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ನೆಲೆಯ ಕಿರು ಪರಿಚಯದ ಚಿತ್ರ ಪ್ರದರ್ಶನದೊಂದಿಗೆ ದಿನದ ಕಾರ್ಯಕ್ರಮ ಶುರುವಾಯಿತು. ತದನಂತರ ಮಕ್ಕಳು ಹಾಡುಗಳಿಂದ ಎಲ್ಲ ಸದಸ್ಯರ ಮನ ಗೆದ್ದರು. ಗುರು ಬಸವರಾಜರು ತಮ್ಮ ಮ್ಯಾಜಿಕ್ ನಿಂದ ಮಕ್ಕಳನ್ನು ರಂಜಿಸಿದರು.

ನೆಲೆಯವರು ಎಲ್ಲರಿಗು ರುಚಿಕರ ಊಟವನ್ನೂ ಏರ್ಪಡಿಸಿದ್ದರು. ಮಕ್ಕಳ ಜೊತೆಯ ಊಟ ಸಂತೋಷವನ್ನು ನೀಡಿತು. ಊಟದ ತರುವಾಯ ಮಕ್ಕಳಿಗೆ ಆರೆಕಲ್ ಸದಸ್ಯ ವೈಭವರಿಂದ ಬೇರೆ ಬೇರೆ ಭಾಷೆಗಳ ಪರಿಚಯದ ಪ್ರಯತ್ನ ಮಾಡಲಾಯಿತು. ನಂತರ ದಿನದ ಮುಖ್ಯ ಕಾರ್ಯಕ್ರಮ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳೇ ವಿಶೇಷ ಅತಿಥಿಗಳಾಗಿದ್ದ ಈ ಮಹೋತ್ಸವಕ್ಕೆ ಉತ್ಸಾಹದ ಬುಗ್ಗೆ ಉಕ್ಕಿ ಹರಿಯುತ್ತಿತ್ತು. ತುಂಬಾ ಶ್ರದ್ಧೆ, ಸಂಭ್ರಮದಿಂದ ಮಕ್ಕಳು ತಮ್ಮನ್ನು ತಾವು ತೊಡಗಿಸಿಕೊಂಡರು. ತಮ್ಮಗೆ ಇಷ್ಟವಾದ ಹೆಸರನ್ನು ಸಸಿಗಳಿಗೆ ಇಡುವುದರ ಮೂಲಕ ಅವುಗಳ ನಿರ್ವಹಣೆಯ ಹೊಣೆಯನ್ನು ತೆಗೆದುಕೊಂಡರು.

ಕೊನೆಯಲ್ಲಿ ಮಕ್ಕಳಿಗೆ ಗಾಯಕ ವಿನಯಕುಮಾರ & ಅವಿರತದ ಸದಸ್ಯರಿಂದ ಹಾಡಿನ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು. ವಿನಯಕುಮಾರ ನನ್ನಯ ಬಣ್ಣದ ತುತ್ತೂರಿ & ರೆಕ್ಕೆಯೊಂದಿದ್ದರೆ ಸಾಕೆ  ಹಾಡುಗಳಿಂದ ಮಕ್ಕಳಿಗೆ ಮುದ ನೀಡಿದರು. ಅವಿರತದ ರವೀಂದ್ರ ವಂದನಾರ್ಪಣೆ ಮಾಡಿದರು. ನೆಲೆಯವರು ಈ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ದಿನದಂತ್ಯಕ್ಕೆ ಅವಿರತ & ಆರೆಕಲ್ ಸದಸ್ಯರು ಮಕ್ಕಳ ಉತ್ಸಾಹಕ್ಕೆ, ಆನಂದಕ್ಕೆ ಮಾರುಹೋದರು. ಒಂದು ಸಾರ್ಥಕ ಕಾರ್ಯದ ಸಂತಸಕ್ಕೆ ಎರಡು ತಂಡಗಳು ಸಾಕ್ಷಿಯಾದವು. 











No comments:

Post a Comment