ಅವಿರತವಾಗಿ ವರ್ಷವಿಡೀ ಸಮಾಜಮುಖಿ ಕಾರ್ಯಕ್ಷೇತ್ರವನ್ನು ತನ್ನದಾಗಿಸಿಕೊಂಡಿರುವ ಅಪರೂಪದ ಸಂಸ್ಥೆ, ’ಅವಿರತ ಪ್ರತಿಷ್ಠಾನ’. ಈ ಸಂಸ್ಥೆಯ ಒಂದು ಪ್ರಮುಖ ಕಾರ್ಯಸೂಚಿಯಾದ ’ಶಿಕ್ಷಣ’, ವರ್ಷದಿಂದ ವರ್ಷಕ್ಕೆ ಹೊಸ ಹೊಸ ಧ್ಯೇಯ ಸಾಧನೆಗಳೊಂದಿಗೆ ಮುನ್ನುಗ್ಗುತ್ತಿದೆ.

’ಅವಿರತ’ ಪ್ರತಿ ಬಾರಿ ಪ್ರತಿ
ಶಾಲೆಗೂ ಎಡತಾಕಿದಾಗಲೂ ಗ್ರಾಮೀಣ ಶಾಲೆಗಳ / ಶಿಕ್ಷಕರ / ಮಕ್ಕಳ ಒಂದೊಂದು ಸಮಸ್ಯೆಗಳು ಗೋಚರವಾಗತೊಡಗಿದವು. ಸರ್ಕಾರದ ಬೆಂಬಲವಿದ್ದಾಗ್ಯೂ, ಶಿಕ್ಷಕರ ಬದ್ದತೆಯ ಜೊತೆಗೂ ಪೋಷಕರ ಆರ್ಥಿಕ ಹಾಗೂ
ಪರಿಸರದ ಕಾರಣಗಳಿಂದ ಬೇರು ಮಟ್ಟದಲ್ಲೇ ಮಕ್ಕಳಿಗೆ ಉಂಟಾಗುತ್ತಿರುವ ಸಮಸ್ಯೆ, ಅವರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಿಧಾನವಾಗಿ
ಸ್ವಲ್ಪ ಸ್ವಲ್ಪವೇ ಅರಿವಾಗ ತೊಡಗಿತು. ಈ ಸಮಸ್ಯೆ, ಸವಾಲುಗಳನ್ನೆದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಶಾಲಾ
ಮಕ್ಕಳಿಗೆ ಯಾವ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಅನ್ನುವ ಯೋಚನೆ, ’ಅವಿರತ’ದ ಮನಸ್ಸಿನಲ್ಲಿ ಮೊಳಕೆಯೊಡೆದಾಗ
ಪ್ರಾರಂಭವಾದದ್ದೇ ಆಪ್ತ ಸಮಾಲೋಚನೆ / ಶಿಕ್ಷಣ ಮಾರ್ಗದರ್ಶನ
ಎನ್ನುವ ಮಾರ್ಗಗಳು.
ಈ ಹಿಂದೆ ಕೆಲವು ಶಾಲೆಗಳಲ್ಲಿ ಮಾರ್ಗದರ್ಶನ ಕಾರ್ಯಕ್ರಮ
ಮಾಡಿ ಅನುಭವವಿದ್ದ ಕಾರ್ಯಕರ್ತರು ನಮ್ಮಲ್ಲೇ ಹಲವರಿದ್ದರು. ಹಿಂದಿನ ಆ
ಕಾರ್ಯಕ್ರಮಗಳೆಲ್ಲಾ, ಒಂದು ದಿನದ ಅಥವಾ ಹೆಚ್ಚೆಂದರೆ ಎರಡು ದಿನಗಳ ಮಟ್ಟಿಗಿನ
ಕಾರ್ಯಕ್ರಮಗಳಾಗಿದ್ದವು. ಆದರೆ, ಈ ಬಾರಿ ’ಅವಿರತ’ ತಂಡವು ಈ
ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮವನ್ನು ಬೇರೆಯದೇ ರೀತಿಯಲ್ಲಿ ಜಾರಿಗೊಳಿಸಲು ಚಿಂತಿಸಿತ್ತು. ಅದೇನೆಂದರೆ, ’ಮಾರ್ಗದರ್ಶನ’ದ
ಅವಶ್ಯಕತೆ ಇರುವ ಒಂದು ಶಾಲೆಯನ್ನು ಗುರುತಿಸಿ, ಆ ಶಾಲೆಯೊಂದಿಗೆ
ಸಂಪೂರ್ಣ ಒಂದು ಶೈಕ್ಷಣಿಕ ವರ್ಷದ ಅವಧಿಯಲ್ಲಿ ಆಪ್ತ ಸಮಾಲೋಚನೆ, ಮಾರ್ಗದರ್ಶನ, ಪಠ್ಯೇತರ, ಪಠ್ಯಪೂರಕ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸಿ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಮಾಡುವ ಇಚ್ಚೆ, ಗುರಿ ಹೊಂದಿತ್ತು. ಒಟ್ಟೂ ಕಾರ್ಯಕ್ರಮದ
ಸ್ವರೂಪ ಹಾಗೂ ಪ್ರಾಮುಖ್ಯತೆಯ ಅರಿವಿನೊಂದಿಗೆ ಹಾಗೂ ಸಾಕಷ್ಟು ಪೂರ್ವಭಾವಿ ತಯಾರಿಗಳೊಂದಿಗೆ ’ಅವಿರತ ಪಡೆ’ ಸಶಕ್ತ ತರಬೇತಿ
ನೀಡಲು ಮುಂದಾಯಿತು.
2015-16 ನೇ ಸಾಲಿನಲ್ಲಿ
ಕೆಲವು ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮವನ್ನು ಮಾಡಲು ಮೊದಲು ಆಯ್ಕೆ ಮಾಡಿದ್ದು, ಕನಕಪುರ ತಾಲ್ಲೂಕಿನ ಚಿಕ್ಕಮುದವಾಡಿ ಗ್ರಾಮದ
ಪ್ರೌಢಶಾಲೆಯನ್ನು. ಇಲ್ಲಿ 8, 9 ಹಾಗೂ 10ನೇ ತರಗತಿಗಳು ಸೇರಿ ಒಟ್ಟು 276 ವಿದ್ಯಾರ್ಥಿಗಳಿದ್ದಾರೆ. ಕೇವಲ 10ನೇ ತರಗತಿಯೊಂದರಲ್ಲೇ 107 ಮಕ್ಕಳಿದ್ದಾರೆ. ನಮ್ಮ ಮೊದಲ ಭೇಟಿ
ದಿನಾಂಕ 10-07-2015 ರಂದು ಅಷ್ಟೂ 276 ವಿದ್ಯಾರ್ಥಿಗಳಿಗೆ
ನೋಟ್ ಬುಕ್ ಕೊಡುವ ಕಾರ್ಯಕ್ರಮವಾದರೆ, ಎರಡನೇ ಭೇಟಿ, ದಿನಾಂಕ 01-08-2015 ರಂದು ವಿದ್ಯಾರ್ಥಿಗಳ
ಜೊತೆಗಿನ ಆಪ್ತ ಸಮಾಲೋಚನೆಯಾಗಿತ್ತು. ಈ ಕಾರ್ಯಕ್ರಮವು
ಬಹುತೇಕ ಮಕ್ಕಳಲ್ಲಿ ಸ್ವಲ್ಪ ವಿಶ್ವಾಸವನ್ನು ಚಿಗುರುವಂತೆ ಮಾಡಿತ್ತು.
ಆಪ್ತ ಸಮಾಲೋಚನೆ:

ಕ್ರೀಡಾ ದಿನ:

ವೃತ್ತಿ / ಶಿಕ್ಷಣ ಮಾರ್ಗದರ್ಶನ:

’ವಿಜ್ಞಾನ ವಿಸ್ಮಯ’
’ಅವಿರತ’ದ ಮೂಲ ಸೆಲೆ ಇರುವುದೇ ಸರಿಸುಮಾರು 30ರ ಆಚೀಚಿನ ಸೇವಾಬದ್ದತೆಯುಳ್ಳ ಯುವಕ ಯುವತಿಯರಲ್ಲಿ. ಬಹುತೇಕರು ವಿಜ್ಞಾನದ ಉನ್ನತ ಅಧ್ಯಯನದ ಮೂಲಕವೇ ವೃತ್ತಿ
ಹೊಂದಿರುವಂಥವರು. ಈ ಇಂತಹ ಕಾರ್ಯಕರ್ತರು ಕಟ್ಟಿದ ಪಡೆಯೇ ’ಅವಿರತ ವಿಜ್ಞಾನ ವಿಸ್ಮಯ’. ಈ ಪಡೆ ಜವಾಹರಲಾಲ್ ಪ್ಲಾನಿಟೋರಿಯಂ, ವಿಶ್ವೇಶ್ವರಯ್ಯ ಮ್ಯೂಸಿಯಂ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂತಾದ
ಸಂಸ್ಥೆಗಳೊಡಗೂಡಿ ತಾವೇ ಸ್ವಯಂ ತರಬೇತಿ ಹೊಂದಿ ಮಕ್ಕಳಿಗೆ ವಿಜ್ಞಾನದ ರುಚಿ ಹತ್ತಿಸಲು ತಯಾರಾದ
ಸಶಕ್ತಕೂಟ. ದಿನಾಂಕ 08-10-2015 ರಂದು ಕರ್ನಾಟಕ
ರಾಜ್ಯ ವಿಜ್ಞಾನ ಪರಿಷತ್ತಿನ ಇಬ್ಬರು ವಿಜ್ಞಾನಿಗಳ ಜೊತೆಗೂಡಿ ಒಂದು ದಿನದ ವಿಜ್ಞಾನ
ಕಾರ್ಯಾಗಾರವನ್ನು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಗಳ
ಮೂಲಕ ಅನೇಕ ಪ್ರಯೋಗಗಳನ್ನು ಮಾಡಿ ತೋರಿಸಿತು. ಕಾರ್ಯಕ್ರಮ ಮುಗಿದ
ಮೇಲೆ ವಿದ್ಯಾರ್ಥಿಗಳು ಕೇಳುತ್ತಿದ್ದ ಪ್ರಶ್ನೆಗಳು ನಮ್ಮ ಪ್ರಯತ್ನದ ಸಾರ್ಥಕತೆಗೆ
ಸಾಕ್ಷಿಯಂತಿದ್ದವು.
ಕೌಶಲ್ಯ ತರಬೇತಿ
ಶಿಕ್ಷಕರ ಮನವಿಯ ಮೇರೆಗೆ ಮಾಡಿದ ಇನ್ನೊಂದು ಅವಶ್ಯಕ ಕಾರ್ಯಕ್ರಮ ಅಥವಾ ತರಬೇತಿ, ’memory
techniques training’. ನಮ್ಮ ಸದುದ್ದೇಶವನ್ನು ಅರ್ಥ ಮಾಡಿಕೊಂಡ ಪ್ರಖ್ಯಾತ
ತಜ್ಞ ರಮೇಶ್ ಬಾಬು ಅವರು ತುಮಕೂರಿನಿಂದ ತಮ್ಮದೇ ಸ್ವಂತ ಖರ್ಚಿನಲ್ಲಿ ಶಾಲೆಗೆ ಭೇಟಿ ನೀಡಿ, 4 ಗಂಟೆಗಳ ಕಾಲ ನೆನಪಿನ ಶಕ್ತಿಯ ಬಗ್ಗೆ, ಉತ್ತರ ಬರೆಯುವ ಯುಕ್ತಿಗಳ ಬಗ್ಗೆ, ದಿನಚರಿಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿ
ವಿದ್ಯಾರ್ಥಿಗಳಿಗೆ ನೆರವಾದರು.

ಕಳೆದ ವಾರ ಅಲ್ಲಿನ
ಶಿಕ್ಷಕರು ಫೋನ್ ಮಾಡಿ, ’ಸಾರ್, ’ಅವಿರತ’ದ ಕಾರಣದಿಂದ
ಎಲ್ಲಾ ಮಕ್ಕಳೂ, ಎಲ್ಲಾ ತರಗತಿಗಳಲ್ಲೂ Special Classes (ವಿಶೇಷ ತರಗತಿಗಳು) ಗಳಿಗೂ
ಹಾಜರಾಗುತ್ತಿದ್ದಾರೆ. ನೀವು ಹುಟ್ಟು ಹಾಕಿದ ಈ ಹುರುಪು ಒಳ್ಳೆಯ ಫಲಿತಾಂಶ
ತರುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಈ ಶನಿವಾರ, 26-03-2015 ರಂದು Hall Ticket ಕೊಟ್ಟು ಹರಸಿ
ಕಳುಹಿಸುತ್ತಿದ್ದೇವೆ. ನೀವು ಬಂದು ಮಕ್ಕಳನ್ನು ಮಾತನಾಡಿಸಿದರೆ ಮಕ್ಕಳಲ್ಲಿ ಇನ್ನೂ ಸ್ವಲ್ಪ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬನ್ನಿ’ ಎಂದರು. ಇಲ್ಲವೆನ್ನಲು ಮನಸ್ಸಾಗಲಿಲ್ಲ. ’ಅವಿರತ’ದ ಮತ್ತೊಬ್ಬ ವೃತ್ತಿಪರ
ಮಾರ್ಗದರ್ಶಕರೊಬ್ಬರೊಂದಿಗೆ ಹೋಗಿ ಮಕ್ಕಳನ್ನು ಇನ್ನಷ್ಟು ಹುರಿದುಂಬಿಸಿ ಬಂದಿದ್ದೇವೆ. ಅಂದು ಶಾಲೆಗೆ ಭೇಟಿ ನೀಡಿದ ಎಲ್ಲಾ ಅವಿರತದ ಸದಸ್ಯರಿಗೂ
ಮಕ್ಕಳು ಹಾಗೂ ಶಿಕ್ಷಕರು ಸೇರಿ ಅನಿರೀಕ್ಷಿತವಾಗಿ ಸನ್ಮಾನವನ್ನೂ ಮಾಡಿದರು. ಆ ಮಕ್ಕಳಿಗೆ ನಿಮ್ಮೆಲ್ಲರ ಹಾರೈಕೆ ಇರಲಿ.
ಶಿವಪ್ರಕಾಶ್
ಅವಿರತ
No comments:
Post a Comment