"ಡಾ|| ರಾಜ್
ಕುಮಾರ್", ರಾಜ್ ಒಬ್ಬ ಅದ್ಬುತ ನಟ. ಅವರು ಅಷ್ಟೇ
ಆಗಿದ್ದರೆ ಇಂದು ಆ ಹೆಸರು ಕೇಳಿದಾಗ ಆಗುವ ಪುಳಕ ಬಹುಶಃ ಆಗುತ್ತಿರಲಿಲ್ಲವೇನೋ. ರಾಜ್ ನಟನಾಗಿಯೇ
ನಟನೆಗೆ ಮೀರಿ ಬೆಳೆದವರು. ಪಾತ್ರಗಳಾಗಿದ್ದುಕೊಂಡೇ ಪಾತ್ರಗಳಿಗೂ ಮೀರಿ ಅರ್ಥ ಕೊಟ್ಟವರು.
ಮುಗ್ದತೆ ತೋರುತ್ತಲೇ ವಿಶ್ವಮಾನವರಾಗಿದ್ದವರು. ಕನ್ನಡಿಗ ಎಂದರೆ ಆವ ಹೇಗಿದ್ದಾನೆ ಎಂಬುದಕ್ಕೆ
ರಾಜ್ ಅಪ್ಪಟ ಉದಾಹರಣೆ. ಹಾಗಾಗಿ ನಮ್ಮೆಲ್ಲಾ ಸಂಸ್ಕೃತಿಯನ್ನು ಮೈದಳೆದಂತೆ ಕನ್ನಡಿಗರಿಗೆ ಒಂದು
ಸ್ವಾಭಿಮಾನದ, ಹೆಮ್ಮೆಯ 'ಐಡೆಂಟಿಟೀ' ಕೊಟ್ಟವರು ರಾಜ್. ಒಮ್ಮೆ ಕುವೆಂಪು
ಅವರೇ ಹೇಳಿದಂತೆ ವಿಶ್ವ ಮಾನವ ಸಂದೇಶ ಹರಡಬಲ್ಲ ಚೇತನ ರಾಜ್ ರಿಗೆ ಇತ್ತು. ಬಹುಶಃ ಇಂದಿಗೆ ಇದು
ಕೇವಲ ಹೊಗಳಿಕೆಯ ಮಾತಾಗುತ್ತಿತ್ತೇನೋ; ಅಂದು ಒಂದು ಗೋಕಾಕ್ ಚಳುವಳಿ ಆ ರೂಪ ತಾಳದಿದ್ದರೆ. ಆದರೆ ಹಾಗಿಲ್ಲ. ಕನ್ನಡಿಗರ
ವಿವಿಧ ಬೇಡಿಕೆಗಳಿಗಾಗಿ ರೂಪುಗೊಂಡ ಚಳುವಳಿ ಇನ್ನೇನು ನೆಲಕಚ್ಚಿತು ಎನ್ನುವಾಗ ರಾಜ್ ಬಂದರು, ಚಳುವಳಿಯ ಮುಂದಾಳತ್ವ ವಹಿದರು, ಮುಂಚೂಣಿಯಲ್ಲಿದ್ದವರು ಕಲ್ಲುಬಂಡೆಯಂತೆ
ಅವರ ಬೆನ್ನಿಗೆ ನಿಂತರು. ಕನ್ನಡಿಗರು ಒಗ್ಗೂಡಿ ನಿಂತರೆ ಏನನ್ನಾದರೂ ಸಾಧಿಸಬಲ್ಲರು ಎಂಬುದು
ಸಾಬೀತಾಯಿತು. ಹಾಗಾಗಲು ಆ ಏಕತೆ ಮೂಡಲು ಒಂದು ದೊಡ್ಡ ಶಕ್ತಿಯ ಅವಶ್ಯಕತೆ ಇತ್ತು. ಆ ಶಕ್ತಿಯೇ
ರಾಜ್. ಪ್ರಪಂಚದ ಪ್ರತಿ ಸಂಸ್ಕೃತಿ, ಜನಸಮುದಾಯ ಒಬ್ಬ ಸಾಂಸ್ಕೃತಿಕ ನಾಯಕನನ್ನು ಬಯಸುತ್ತದೆ, ಸೃಷ್ಟಿಸುತ್ತದೆ ಮತ್ತು ಮೆರೆಸುತ್ತದೆ.
ಕನ್ನಡಿಗರ ಪಾಲಿನ ಆ ನಾಯಕ ರಾಜ್ ಆಗಿದ್ದರು. ಹೇಳುತ್ತಾ ಹೋದರೆ ಪುಟ ಸಾಲದು. ಅಂತ ಮಾಹಾನ್
ಶಕ್ತಿಯನ್ನು ಮತ್ತೊಮ್ಮೆ ಮಗದೊಮ್ಮೆ ನೆನೆಯಬೇಕೆನಿಸುತ್ತದೆ.
ಹೇಗೆ??

ಕಾರ್ಯಕ್ರಮಕ್ಕೆ ದುಡಿದ ಮಧು, ಶಶಿ ರಾಜ ಶಶಿಧರ್, ಜ್ಯೋತಿ,ರವಿಂದ್ರ,ರವಿ ಕುಲಕರ್ಣಿ, ಪ್ರಸನ್ನ ಲಕ್ಷ್ಮೀಪುರ, ಪ್ರಸನ್ನ ಲಕ್ಷ್ಮೀಪುರದೀಪಕ್ ದೀಪಕ್ ಪೀ, ಶ್ರೀಕಾಂತ್, ಕಾರ್ತಿಕ್ ಬೇಲೂರ್, ಕಿರಣ್, ಅನಿಲ್, ರಘು , ಶರತ್ ಗೌಡ, ಗುರು ಬಾ, ಹರೀಶ್,ಸಿಯ, ಮುನಿರಾಜ್, ಶಿವಲಿಂಗೇಗೌಡ, ನಂದಿನಿ, ಸುಶ್ಮ, ಪ್ರತಿಭಾ ಗೌಡ, ಶ್ರಾವಂತಿ, ವರ್ಷ, ಇಲ್ಲಿ ಹೆಸರಿಸಲೇಬೇಕಾದ ಆದರೆ ಹೆಸರು
ತಪ್ಪಿರುವ ಹಲವರಿಗೆ, ಪೋಸ್ಟರ್ ವಿನ್ಯಾಸಗೊಳಿಸಿದ ನಾಗರಾಜ್
ಅವರಿಗೆ, ಪ್ರಸಾಧನ ವಿಜಯ್ ಅವರಿಗೆ, ಭ್ರಮೆ ತಂಡಕ್ಕೆ, ಕಾರ್ಯಕ್ರಮದ ಎಲ್ಲಾ ಸಹ ಆಯೋಜಕರಿಗೆ, ಸೂತ್ರದಾರ ಸತೀಶ ಸತೀಶ್ ಅವಿರತ ರವರಿಗೆ, ಕೊನೆಯದಾಗಿ ನಾಡನ್ನು ಸಂಭ್ರಮಿಸುವ, ನಾಡು ನುಡಿ, ಸಂಸ್ಕೃತಿಯ ಬಗ್ಗೆ ಅವಿರತವಾಗಿ
ಸಂತಸದಿಂದ ದುಡಿಯುವ, ಅವಿರತಕ್ಕೆ ಒಂದು ದೊಡ್ಡ ಪ್ರಣಾಮ.
No comments:
Post a Comment