ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಈ ಬೇಸಿಗೆಯಲ್ಲಿ ಮಂಡ್ಯ ಜಿಲ್ಲೆಯ ಗ್ರಾಮೀಣ ಮಕ್ಕಳಿಗೆ ವಿಶಿಷ್ಟವಾದ ಹತ್ತು ದಿನಗಳ ಶಿಬಿರವನ್ನು ಆಯೋಜಿಸಿತ್ತು. ಈ ಶಿಬಿರದಲ್ಲಿ ’ಅವಿರತ ಪ್ರತಿಷ್ಟಾನ’ವೂ ಕೈ ಜೋಡಿಸಿದ್ದು ಹೆಮ್ಮೆಯ ಸಂಗತಿ.

ತ್ಮಕ ಜಗತ್ತನ್ನು ಎದುರಿಸುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳನ್ನು ಸಬಲರನ್ನಾಗಿ ಮಾಡಿ, ಅವರ ಹಿಂಜರಿಕೆಯನ್ನು ಹೋಗಲಾಡಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿತ್ತು.

೧. ಕಂಪ್ಯೂಟರ್ ಶಿಬಿರವು ಏಪ್ರಿಲ್ ೩೦ ರಿಂದ ಮೇ ೭ ರ ತನಕ ನಡೆಯಿತು. ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ಕಂಪ್ಯೂಟರ್
ಶಿಕ್ಷಣಕ್ಕೆ ಮೀಸಲಾಗಿತ್ತು. ಒಂದು ಗಂಟೆ ಪ್ರ್ಯಾಕ್ಟಿಕಲ್ಸ್ ಹಾಗೂ ಎರಡು ಗಂಟೆ ಥಿಯರಿ ತರಬೇತಿ ಕೊಡಲಾಯಿತು.

೩. ಕಂಪ್ಯೂಟರ್ ನ ಪ್ರಾಥಮಿಕ ವಿಷಯಗಳಾದ, ಹಾರ್ಡ್‌ವೇರ್, ಸಾಫ್ಟ್‌ವೇರ್, ಎಮೆಸ್ ವರ್ಡ್, ಎಮೆಸ್ ಎಕ್ಸ್ಸೆಲ್, ಪೇಂಟಿಂಗ್, ಇಂಟರ್‌ನೆಟ್
ಮುಂತಾದವುಗಳ ಪರಿಚಯ ಮಾಡಿಸಲಾಯಿತು. ಸ್ವತಂತ್ರವಾಗಿ ಕಂಪ್ಯೂಟರ್ ನಿರ್ವಹಿಸುವ ಆತ್ಮವಿಶ್ವಾಸ ತರುವುದೇ ಇದರ ಉದ್ದೇಶವಾಗಿತ್ತು.

೫. ಈ ಶಿಬಿರವು ಸತತ ಹತ್ತು ದಿನಗಳ ಕಾಲ ನಡೆದು, ಶಿಬಿರದಲ್ಲಿ ಪಾಲ್ಗೊಳ್ಳುವ ಸಂಪನ್ಮೂಲ ವ್ಯಕ್ತಿಗಳಿಗೂ, ಶಿಕ್ಷಕರಿಗೂ, ಸ್ವಯಂ ಸೇವಕರಿಗೂ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು
೬. ಅವಿರತದಿಂದ ಪ್ರತಿದಿನ ಒಂದೊಂದು ತಂಡದಂತೆ, ಒಟ್ಟು ೫೦ ಸ್ವಯಂ ಸೇವಕರು ತರಬೇತಿಯಲ್ಲಿ ಭಾಗವಸಿದ್ದರು.
೭. ಅವಿರತವತಿಯಿಂದ ಮೆಡಿಕಲ್ ಕ್ಯಾಂಪ್ ಕೂಡ ಇದೆ ಸಂದರ್ಭದಲ್ಲಿ ಮಾಡಲಾಯಿತು.

ಅವಿರತಕ್ಕೆ ಈ ಅವಕಾಶ ನೀಡಿದಕ್ಕೆ ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ನವರಿಗೆ ಹೃತ್ಪೂರ್ವಕ ಧನ್ಯಾವಾದಗಳು.
No comments:
Post a Comment